ಬೆಳಗಾವಿ : ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಘೋಷಿಸಿದರು.
ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಪಿಎಸ್‌ಐ ನೇಮಕಾತಿಯಲ್ಲಿ ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರಣಕ್ಕೂ ಇರಬಾರದು, ಇಂಥ ಸರ್ಕಾರವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, ನೀವು ಉಳಿಯುತ್ತೇವೆ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ, ಕಿವಿಯೂ ಕೇಳಿಸಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂದು ತೀವ್ರ ಕಿಡಿಕಾರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

