BigTv News
August 17, 2024
Breaking News, ತುಮಕೂರು
ತುಮಕೂರು: ಗುಬ್ಬಿ ಪಟ್ಟಣದ ವಿನಾಯಕನಗರದಲ್ಲಿ ಶಾಲಾ ಬಸ್ ಹರಿದು 9ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ. ತೇಜಸ್(14) ಮೃತ ಬಾಲಕ. ಚಲಿಸುತ್ತಿದ್ದ ಬೈಕ್ನಿಂದ ಆಯತಪ್ಪಿ ಕೆಳಗೆ ಬಿದ್ದ ಬಾಲಕನ ತಲೆ ಮೇಲೆಯೇ ಬಸ್ ಹರಿದು ಈ ದುರ್ಘಟನೆ ಸಂಭವಿಸಿದೆ. ಇತ್ತ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಕುರಿತು ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read More »
BigTv News
August 12, 2024
Breaking News, ತುಮಕೂರು
ತುಮಕೂರ: ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರವಿ, ಭಾನುವಾರ ತನ್ನ ಆಪ್ತ ಸ್ನೇಹಿತ ಶಿವಕುಮಾರ್ ನ ಶೆಡ್ ಗೆ ಹೋಗಿದ್ದು ಅಲ್ಲಿ ಆತನಿಗೆ ಕಲ್ಲು ಎತ್ತಿ ಹಾಕಿ ಕೊಲೆಯಾದ ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ಹಂಗರಹಳ್ಳಿ ಗ್ರಾಮ ನಿವಾಸಿ ರವಿ (40) ಮೃತ ದುರ್ದೈವಿ.ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ನಂತರ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತೆರಳಿದ್ದು, ಶಿವಕುಮಾರ್ ರವಿ ಮಲಗಿರುವುದನ್ನು ನೋಡಿ ತಲೆಯ ಮೇಲೆ …
Read More »
Shaikh BigTv
August 12, 2024
Breaking News, ತುಮಕೂರು
ತುಮಕೂರ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಜರುಗಿದೆ. ನವೀನ್ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ತೆರಳುತ್ತಿದ್ದರು. ಶೇಷಾದ್ರಿ ಹಾಗೂ ಸಚಿನ್ ಎಂಬುವರು ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್‌ಗಳ ನಡುವೆ ಡಿಕ್ಕಿ ಹೊಡೆದಿದೆ.ನವೀನ್, ಶೇಷಾದ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಚಿನ್ ಎಂಬುವರ …
Read More »
BigTv News
July 20, 2024
Breaking News, ಅಪರಾಧ, ಕರ್ನಾಟಕ, ತುಮಕೂರು
ತುಮಕೂರು ಚಲಿಸುತಿದ್ದ ರೈಲಿಗೆ ತಲೆ ಕೊಟ್ಟು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತುಮಕೂರು ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣದ ಸಮೀಪ ಶನಿವಾರ ನಡೆದಿದೆ. ಮೃತರನ್ನು ಶಿವಪ್ರಕಾಶ್ ಆರಾಧ್ಯ ಎಂದು ಗುರುತಿಸಲಾಗಿದೆ.. ಶಿವಪ್ರಕಾಶ್ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಹಿಂದೆ ತುರುವೇಕೆರೆ ಪೊಲೀಸ್ ಠಾಣೆಯಲ್ಲೂ ಕೆಲಸ ಮಾಡಿದ್ದರು ಎನ್ನಲಾಗಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಯಶವಂತಪುರ ರೈಲ್ವೆ …
Read More »
BigTv News
November 25, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಕಂಡ ಕಾಂಗ್ರೆಸ್, 2024 ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸಿದ್ದು, ಜೆಡಿಎಸ್ ಹಾಗೂ ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದು, ಇದೀಗ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಈ ಕುರಿತು ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಸಚಿವ ವಿ.ಸೋಮಣ್ಣರನ್ನಲ್ಲದೆ ನನ್ನನ್ನೂ ಕೂಡ ಕಾಂಗ್ರೆಸ್‌ನವರು ಕರೆದಿದ್ದಾರೆ ಎಂದು ಹೊಸ …
Read More »
BigTv News
October 24, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರ: ಮಳೆಯಿಲ್ಲದೇ ಕಂಗಲಾಗಿರುವ ರೈತರು, ಮಧುಗಿರಿ ಭಾಗದಲ್ಲಿ ಬೆಳೆಗಳನ್ನು ನಾಶಪಡಿಸುತ್ತಿರುವ ಘಟನೆ ಜರುಗಿದೆ. ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಶೇಂಗಾವನ್ನ ಟ್ರಾಕ್ಟರ್ ನಲ್ಲಿ ರೈತ ನಾಗರಾಜಪ್ಪ ನಾಶಪಡಿಸಿದ್ದಾನೆ. ಮಳೆಯಿಲ್ಲದೇ ಫಸಲು ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ಬೆಳೆ ನಾಶ ಮಾಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರು ಇದ್ದು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ಘಟನೆ ಜರುಗಿದೆ. ಸುಮಾರು ನಾಲ್ಕು ಎಕರೆಯಲ್ಲಿ ಶೇಂಗಾ ಬೆಳೆ ಬೆಳೆಯಲಾಗಿತ್ತು. ಲಕ್ಷಾಂತರ …
Read More »
BigTv News
September 2, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು: ಪೊಲೀಸ್ ಸಿಬ್ಬಂದಿಯೊಬ್ಬರು ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ನ್ಯಾಯಕ್ಕಾಗಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ. ಸಂತ್ರಸ್ತೆಯ ಹೆಸರು ಸಹನಾ. ಈಕೆಯ ಪತಿ ಸುನೀಲ್ ಕುಮಾರ್, ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರಸಿಕೆರೆ ಮೂಲದ ಸಹನಾ ಒಂದೂವರೆ ವರ್ಷದ ಹಿಂದೆ ಅವರು ವಿವಾಹವಾಗಿದ್ದರು. ಮದುವೆಯಾದ ಎರಡೇ ತಿಂಗಳಲ್ಲಿ ಸಹನಾಗೆ ಕಾಯಿಲೆಯೊಂದು ಕಾಣಿಸಿಕೊಂಡಿತ್ತು. ಈ ವೇಳೆ, …
Read More »
BigTv News
August 24, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು: ಮೂಢನಂಬಿಕೆ ಪಾಲಿಸಲು ಬಾಣಂತಿ ಹಾಗೂ ಶಿಶುವನ್ನು ಊರಿನಿಂದ ಹೊರಗಿಟ್ಟಾಗ ಜಿಲ್ಲೆಯ ಗೊಲ್ಲರಹಟ್ಟಿ ಸಮೀಪ ಮಗು ಮೃತಪಟ್ಟು ಬಾಣಂತಿ ನರಳಾಡಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೊಬ್ಬ ಬಾಣಂತಿಯನ್ನು ಗ್ರಾಮದಿಂದ ಹೊರಗಿಡಲಾಗಿದ್ದು, ನ್ಯಾಯಾಧೀಶರು ಮಧ್ಯಪ್ರವೇಶಿಸಿ ಮೌಢ್ಯಾಚರಣೆಗೆ ತಡೆಯೊಡ್ಡಿದ ಘಟನೆ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಬಾಣಂತಿಯನ್ನು ಹೊರಗಿಟ್ಟಿರುವ ಬಗ್ಗೆ ಬುಧವಾರ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಗುಬ್ಬಿ ನ್ಯಾಯಾಲಯದ …
Read More »
BigTv News
August 11, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರೆಂದು ಇನ್ನೂ ಅಂತಿಮವಾಗಿಲ್ಲ. ಇದರ ನಡುವೆಯೇ ನೊಣವಿನಕೆರೆಯ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಅವರು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಎಂದು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾತನಾಡಿರುವ ಗುರೂಜಿ, ಗ್ರಹ-ಗತಿಗಳ ಬಲಾಬಲಗಳನ್ನ ತಾಳೆ ಹಾಕಿ ನೋಡಿದ್ರೆ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ. ಯತ್ನಾಳ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ …
Read More »
BigTv News
June 23, 2023
News, ಕರ್ನಾಟಕ, ತುಮಕೂರು
ತುಮಕೂರ ಜಿಲ್ಲೆಯ ತುರುವೇಕೆರೆಯ ತಾಲೂಕಿನ ದಂಡಿನ ಶಿವರ ಹೋಬಳಿ ಬಾಣಸಂದ್ರ ವ್ಯಾಪ್ತಿಗೆ ಒಳಪಡುವ ಕಳ್ಳನ ಗಿಡ ಎಂಬ ಹೆಸರಿನ ತೋಟದ ಮನೆಯಲ್ಲಿ,ಕಳ್ಳತನ ನಡೆದಿದೆ. ಕಳ್ಳತನ ಮಾಡಿದ ಕದೀಮರು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.ರಾತ್ರಿ ಸರಿ ಸುಮಾರು 8:55 ರಿಂದ 9:55ರ ಒಳಗೆ ಈ ತೋಟದ ಮನೆಯಲ್ಲಿ ವಾಸವಿರುವ ಕೃಷ್ಣೇಗೌಡ(60 ವರ್ಷ) (ಪತಿ) ಇಂದ್ರಮ್ಮ(55 ವರ್ಷ) (ಪತ್ನಿ)ಎಂಬುವರ ಮನೆಯ ಮೇಲೆ ಮಾರಕಾಸ್ತ್ರಗಳನ್ನು ಹೊಂದಿದ್ದ 10 ದುಷ್ಕರ್ಮಿಗಳ ತಂಡ, ಇದಕ್ಕೂ ಒಂದು ದಿನ …
Read More »