Breaking News

ತುಮಕೂರ ಜಿಲ್ಲೆಯ ತುರುವೇಕೆರೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕಳ್ಳತನ.

ತುಮಕೂರ ಜಿಲ್ಲೆಯ ತುರುವೇಕೆರೆಯ ತಾಲೂಕಿನ ದಂಡಿನ ಶಿವರ ಹೋಬಳಿ ಬಾಣಸಂದ್ರ ವ್ಯಾಪ್ತಿಗೆ ಒಳಪಡುವ ಕಳ್ಳನ ಗಿಡ ಎಂಬ ಹೆಸರಿನ ತೋಟದ ಮನೆಯಲ್ಲಿ,ಕಳ್ಳತನ ನಡೆದಿದೆ. ಕಳ್ಳತನ ಮಾಡಿದ ಕದೀಮರು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.

ರಾತ್ರಿ ಸರಿ ಸುಮಾರು 8:55 ರಿಂದ 9:55ರ ಒಳಗೆ ಈ ತೋಟದ ಮನೆಯಲ್ಲಿ ವಾಸವಿರುವ ಕೃಷ್ಣೇಗೌಡ(60 ವರ್ಷ) (ಪತಿ) ಇಂದ್ರಮ್ಮ(55 ವರ್ಷ) (ಪತ್ನಿ)ಎಂಬುವರ ಮನೆಯ ಮೇಲೆ ಮಾರಕಾಸ್ತ್ರಗಳನ್ನು ಹೊಂದಿದ್ದ 10 ದುಷ್ಕರ್ಮಿಗಳ ತಂಡ, ಇದಕ್ಕೂ ಒಂದು ದಿನ ಮುಂಚಿತವಾಗಿಯೇ ಈ ಹತ್ತು ಜನರ ತಂಡದ ಪೈಕಿ ಇಬ್ಬರು ಬುಧವಾರ ರಾತ್ರಿಯೂ ಕೂಡ ಬಂದಿದ್ದರು ಎಂಬುದು ತಿಳಿದು ಬಂದಿದೆ.

ನೆನ್ನೆ ರಾತ್ರಿ ಇದೇ ತಂಡ.
ಏಕಏಕಿ ಮನೆ ಒಳಗೆ ನುಗ್ಗಿ ಕೃಷ್ಣೆಗೌಡ ಎಂಬುವರ ಎಡಗೈ ಅಂಗೈಗೆ ಚಾಕುವಿನಿಂದ ಕುಯ್ದು ,ಬಲಗೈ ಮತ್ತು ಎಡಗೈಗೆ ಮಚ್ಚಿನಿಂದ ಹೊಡೆದು ,ಕೈ ಕಾಲ್ಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆಯನ್ನು ತುರುಕಿ, ಇವರ ಪತ್ನಿಯಾದ ಇಂದ್ರಮ್ಮ ಎಂಬುವರಿಗೂ ಸಹ ಬಾಯಿಗೆ ಬಟ್ಟೆ ತುರುಕಿ, ಬಲವಾಗಿ ಗುದ್ದಿದ್ದು. ಗುದ್ದಿದ್ದ ರಭಸಕ್ಕೆ ಇಂದ್ರಮ್ಮನವರ ಹಲ್ಲುಗಳು ಮುರಿದುಬಿದ್ದಿದೆ ,

ನಂತರ ಎರಡರಿಂದ ಮೂರು ಲಕ್ಷ ಬೆಲೆಬಾಳುವ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯಲ್ಲಿದ್ದ ಓಲೆಗಳನ್ನು ಕಸಿದುಕೊಂಡು ,ಕದೀಮರು ಪರಾರಿಯಾಗಿದ್ದಾರೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *