ತುಮಕೂರ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಜರುಗಿದೆ.
ನವೀನ್ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ತೆರಳುತ್ತಿದ್ದರು. ಶೇಷಾದ್ರಿ ಹಾಗೂ ಸಚಿನ್ ಎಂಬುವರು ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್‌ಗಳ ನಡುವೆ ಡಿಕ್ಕಿ ಹೊಡೆದಿದೆ.ನವೀನ್, ಶೇಷಾದ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸಚಿನ್ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ಇದಾಗಿದೆ.ನೊಣವಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

