ಕುಂದಗೋಳ : ರಸ್ತೆಯ ನಡುವೆ ಗುಂಡಿಯೊಂದು ತೆರೆದಿದ್ದು ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿರೆನೇರ್ತಿ ಚಿಕ್ಕನೇರ್ತಿ ರಸ್ತೆ ಮದ್ಯೆ ಸೃಷ್ಟಿಯಾಗಿದೆ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಹಿರೆನೇರ್ತಿ ಚಿಕ್ಕನೇರ್ತಿ ಇಕ್ಕಟ್ಟಾದ ರಸ್ತೆ ಮದ್ಯೆ ಗುಂಡಿಯೊಂದು ತೆರೆದಿದೆ.
ಸದ್ಯ ಸಾರಿಗೆ ಬಸ್ ಸೇರಿದಂತೆ ಹಲವು ವಾಹನ ಸಂಚಾರ ಮಾಡುವ ಈ ರಸ್ತೆ ಗುಂಡಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಈ ಬಗ್ಗೆ ಸ್ಥಳೀಯ ಜನರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರೂ ಗಮನ ಹರಿಸಿಲ್ಲಾ ಎಂಬ ಮಾಹಿತಿಯನ್ನು ಜನತೆ ನೀಡಿದ್ದಾರೆ. ತೆರೆದ ಗುಂಡಿಯನ್ನು ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ಅಪಾಯ ತಪ್ಪಿಸುವ ಕೆಲಸ ಮಾಡುತ್ತಾರಾ ? ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

