Breaking News

ಪ್ರಯಾಣಿಕ ಬಿಟ್ಟ ಹೋದ ಬ್ಯಾಗ್ ನ್ನು ಮರಳಿಸಿದ ಆಟೋ ಚಾಲಕ

ಧಾರವಾಡ: ಪ್ರಯಾಣಿಕ ಬಿಟ್ಟು ಹೋದ ಬ್ಯಾಗ್ ಅನ್ನು ಆಟೋ ಚಾಲಕ ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ಜರ್ಮನ್ ಆಸ್ಪತ್ರೆಯಿಂದ ಧಾರವಾಡ ಹಳೇ ಬಸ್‌ ನಿಲ್ದಾಣದ ವರೆಗೆ ಆಟೋ ಹತ್ತಿ ಬಂದಿದ್ದರು.ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಗುಳಪ್ಪ ನಿಂಗಪ್ಪ ಕವಳಿ ಎಂಬುವರು ಬ್ಯಾಗ್ ಆಟೋದಲ್ಲಿ ಬಿಟ್ಟು ಹೋಗಿದ್ದು, ನಂತರ ಧಾರವಾಡ ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಬ್ಯಾಗಿನಲ್ಲಿ ಫೋನ್, ಒಂದು ತೊಲೆ ಬಂಗಾರ ಚೈನ್, ಪರ್ಸ್ ಹಾಗೂ ನಗದು ಸಹ ಇತ್ತು. ಆಟೋ ಚಾಲಕ ಪೊಲೀಸರ ಕರೆಗೆ ಸ್ಪಂದಿಸಿ, ಪೊಲೀಸ್‌ ಠಾಣೆಗೆ ಆಗಮಿಸಿ ಬ್ಯಾಗ್‌ ಬಿಟ್ಟು ಹೋದ ಪ್ರಯಾಣಿಕರಿಗೆ ಮರಳಿಸಿ ಮಾನವೀಯತೆ ಮೆರೆದ್ದು, ಪೊಲೀಸ್‌ ಇನ್ಸ್‌ಪೆಕ್ಟ‌ರ್ ಎನ್.ಸಿ ಕಾಡದೇವರ ಅವರು ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About Shaikh BigTv

Check Also

ಬೆಚ್ಚಿಬಿದ್ದ ಯಾದಗಿರಿ; ಹಾಡಹಗಲೇ ಸಿನಿಮೀಯ ರೀತಿ ಪತ್ರಕರ್ತನ ಕಿಡ್ನಾಪ್!

ವಿಜಯಪುರ: ಹಾಡಹಗಲೇ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಘಟನೆ ನಗರದ ಲುಂಬಿನಿ ಪಾರ್ಕ್‌ ಎದುರು …

Leave a Reply

Your email address will not be published. Required fields are marked *