ಧಾರವಾಡ: ಕಾರ್ಕಳದಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.
ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾರ್ಕಳದಲ್ಲಿ ನಡೆದಿದ್ದು ಸಾಮೂಹಿಕ ಅತ್ಯಾಚಾರ. ಅಲ್ತಾಫ್ ಎನ್ನುವವನು ಅತ್ಯಂತ ಕ್ರೌರ್ಯವಾಗಿ ಯುವತಿಯನ್ನು ಕರೆದುಕೊಂಡು ಹೋಗಿ ತನ್ನ ಸಹಚರರನ್ನೂ ಕರೆದುಕೊಂಡು ಹೋಗಿ ಯುವತಿಗೆ ಮತ್ತು ಬರುವ ಔಷಧಿ ಕೊಟ್ಟು ಎಲ್ಲರೂ ಸೇರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಅವನ ಜೊತೆ ಯಾರೆಲ್ಲ ಗೆಳೆಯರು ಇದ್ದರು ಇದು ಬಹಿರಂಗ ಆಗಲಿ ಎಂದಿದ್ದಾರೆ.
ಹಿಂದೂ ಯುವತಿಯನ್ನು ಆತ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನೇ ನಾವು ಕಳೆದ 25 ವರ್ಷಗಳಿಂದ ಹೇಳುತ್ತ ಬಂದಿದ್ದೇವೆ. ಯೋಚನೆ ಮಾಡಿ ಪ್ರೀತಿ ಮಾಡಿ ಎಂದು ಹೇಳುತ್ತಿದ್ದೇವೆ. ನಿಮ್ಮ ಕಣ್ಣು ಇನ್ನೂ ತೆರೆದಿಲ್ಲ ಎಂದರೆ ಏನು ಹೇಳಬೇಕು? ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

