ನವದೆಹಲಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಪೋರ್ಟಲ್ ವೊಂದನ್ನು ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ನೂತನ She-Box ಪೋರ್ಟಲ್ ಬಿಡುಗಡೆ ಮಾಡಿದರು.
ಈ ಫೋರ್ಟಲ್ ಎಲ್ಲಾ ಮಧ್ಯಸ್ಥಗಾರರಿಗೆ ದೂರುಗಳಿಗೆ ಪರಿಹಾರದ ಖಾತ್ರಿ ಮತ್ತು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಒದಗಿಸುತ್ತದೆ. ಅಲ್ಲದೇ ನೋಡಲ್ ಅಧಿಕಾರಿಯ ಮೂಲಕ ದೂರುಗಳ ನೈಜ-ಸಮಯದ ಮೇಲ್ವಿಚಾರಣೆ ಮಾಡಲಾಗುವುದು.
ಇದು ಭಾರತದಾದ್ಯಂತ ಮಹಿಳೆಯರಿಗೆ ಸುರಕ್ಷಿತ ಮತ್ತು ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಬದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ವೈಯಕ್ತಿಕ ಮಾಹಿತಿ ಸಾರ್ವಜನಿಕವಾಗಿ ಬಹಿರಂಗವಾಗದಂತೆ ದೂರುಗಳನ್ನು ಸುರಕ್ಷಿತವಾಗಿ ನೋಂದಾಯಿಸಬಹುದು ಎಂದು ಪೋರ್ಟಲ್ ಖಚಿತಪಡಿಸುತ್ತದೆ.
She-Box ಪೋರ್ಟಲ್ ಮತ್ತು ಸಚಿವಾಲಯದ ಹೊಸ ក ក https://shebox.wcd.gov.in / ಮತ್ತು https://wcd.gov.in/ ಸಂಪರ್ಕಿಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news

