ಕುಂದಗೋಳ : ತಾಲೂಕಿನಲ್ಲಿ ಮಳೆಯಿಂದ ಹಾಳಾಗಿರುವ ರಸ್ತೆ ಸುಧಾರಣೆ ಜೊತೆಗೆ ಎಲ್. ಅಂಡ್ ಟಿ ಕಂಪನಿಯವರು ಜಲಜೀವನ ಯೋಜನೆಯಡಿ ಹಾಕಬೇಕಿರುವ ನೀರಿನ ಪೈಪುಗಳನ್ನು ಯದ್ವಾತದ್ವಾ ಅಗೆದು ರಸ್ತೆ ಹದಗೆಡಿಸಿದ್ದಾರೆ. ಈ ಕೂಡಲೇ ಈ ಅವ್ಯ ಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕುಂದಗೋಳ ತಹಶೀಲ್ದಾರ ಕಚೇರಿ ಎದುರು ಕರವೇ ತಾಲೂಕ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಪ್ರವೀಣ ಬರದೇಲಿ, ಮಂಜುನಾಥ ಪೂಜಾರ ಸಹಿತ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

