Breaking News

ವಿಶ್ವಕಪ್​ ಗೆದ್ದರೆ ಹಾಸನದ ಕ್ರಿಕೆಟ್​ ಅಭಿಮಾನಿಯಿಂದ ಟೀಂ ಇಂಡಿಯಾಗೆ ಸಿಗಲಿದೆ ವಿಶೇಷ ಉಡುಗೊರೆ

ಕ್ರಿಕೆಟ್​ ತವರು ಇಂಗ್ಲೆಂಡ್​ ನೆಲದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಶ್ವಕಪ್​ ಟೂರ್ನಿಯಲ್ಲಿ ಎಲ್ಲರ ಫೇವರಿಟ್​ ತಂಡ ಭಾರತ ಈ ಬಾರಿ ಟ್ರೋಫಿಯನ್ನು ಎತ್ತಿಹಿಡಿದರೆ ನಮ್ಮ ಕರ್ನಾಟಕದ ಹಾಸನ ಕ್ರಿಕೆಟ್​ ಅಭಿಮಾನಿಯೊರ್ವ ಟೀಂ ಇಂಡಿಯಾಕ್ಕೆ ವಿಶೇಷವಾದ ಉಡುಗೊರೆಯೊಂದು ದೊರೆಯಲಿದೆ.ಹಾಸನದ ಹೊಸಲೈನ್ ರಸ್ತೆಯ ನಿವಾಸಿ ನರೇಂದ್ರ ಎಂಬುವವರಿಂದ ಈಗಾಗಲೇ ಉಡುಗೊರೆ ತಯಾರಾಗುತ್ತಿದ್ದು ಮೈಕ್ರೋ ಚಿನ್ನದ ವಿಶ್ವಕಪ್ ಸಿದ್ಧವಾಗುತ್ತಿದೆ, ವಿಶ್ವಕಪ್​ ಟೂರ್ನಿಯನ್ನು ಜಯಿಸಿ ಟೀಂ ಇಂಡಿಯಾ ಟ್ರೋಫಿಯನ್ನು ತನ್ನ ಬತ್ತಳಿಕೆ ಹಾಕಿಕೊಂಡರೆ, ಈಗ ತಯಾರಾಗುತ್ತಿರುವ ಕಾಲು ಇಂಚು ಎತ್ತರದ 200 ಮಿಲಿ ತೂಕದ ಛೋಟಾ ಗೋಲ್ಡ್ ಕಪ್ ಭಾರತ ತಂಡಕ್ಕೆ ಉಡುಗೊರೆಯಾಗಿ ಸಿಗಲಿದೆ.ಟೀಮ್ ಇಂಡಿಯಾ ಗೆದ್ದು ಬರಲಿದೆ ಎಂಬ ವಿಶ್ವಾಸದಲ್ಲಿ ಕ್ರಿಕೆಟ್​ ಅಭಿಮಾನಿಯಾಗಿರುವ ನರೇಂದ್ರ ಅವರು ಛೋಟಾ ವಿಶ್ವಕಪ್ ತಯಾರಿಸುತ್ತಿದ್ದಾರೆ.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *