Breaking News

ನಾಯಿಗಳ ಮೇಲೆ ಚಿರತೆ ದಾಳಿ

ಸಾಮಾನ್ಯವಾಗಿ ನಾಯಿ ಮೇಲೆ ಚಿರತೆ ದಾಳಿ, ನಾಯಿಯನ್ನು ಹೊತ್ತೊಯ್ದ ಚಿರತೆ ಎಂಬ ಸುದ್ದಿಗಳನ್ನು ಕೇಳಿರುತ್ತೀರಿ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಚಿರತೆಯೊಂದನ್ನು ನಾಯಿಗಳ ಗುಂಪು ಬೇಟೆಯಾಡಿ ಕೊಂದಿದೆ.

ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಐದಾರು ನಾಯಿಗಳು ಚಿರತೆಯನ್ನು ಸುತ್ತುವರಿದು ದಾಳಿ ಮಾಡಿರುವ ಪರಿಣಾಮ ಚಿರತೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅಲ್ಲೇ ಪ್ರಾಣಬಿಟ್ಟಿದೆ.

@TheBrutalNature ಮೇಲೆ ನಾಯಿಗಳ ದಾಳಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 27ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ಮೂರು ದಿನಗಳಲ್ಲಿ 5.7 ಮಿಲಿಯನ್ ಅಂದರೆ 50ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

Share News

About BigTv News

Check Also

ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ

ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ (39) ಅವರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಯಲಹಂಕ …

Leave a Reply

Your email address will not be published. Required fields are marked *