ಕಿನ್ಶಾಸಾ: ಕಾಂಗೋದರಾಜಧಾನಿ ಕಿನ್ಶಾಸಾದ ಮಕಾಲಾ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕನಿಷ್ಠ 129 ಜನ ಮೃತಪಟ್ಟಿದ್ದಾರೆ ಎಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಸರ್ಕಾರ ಹೇಳಿದೆ.ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಚಿವ ಶಬಾನಿ ಲುಕೂ ಮಾಹಿತಿ ಹಂಚಿಕೊಂಡಿದ್ದಾರೆ.
ಭಾನುವಾರ ತಡರಾತ್ರಿ ಮಕಾಲಾ ಕೇಂದ್ರ ಕಾರಾಗೃಹದಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನಿಸಿದಾಗ ಗುಂಡಿನ ದಾಳಿ ನಡೆದಿದೆ. ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಸುಮಾರು 129 ಮಂದಿ ಸಾವಿಗೀಡಾಗಿದ್ದಾರೆ.129 ಮಂದಿಯಲ್ಲಿ 24 ಮಂದಿ ಗುಂಡೇಟಿನಿಂದ ಮೃತರಾಗಿದ್ದಾರೆ. ಉಳಿದವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಜೈಲಿನ ಕಟ್ಟಡ, ಆಹಾರ ಡಿಪೋಗಳು ಮತ್ತು ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 59 ಜನ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

