ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಾಲ್ಕು ಸಿಬ್ಬಂದಿಯೊಂದಿಗೆ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಮೂವರು ಸಿಬ್ಬಂದಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ.
ಹೆಲಿಕಾಪ್ಟರ್ ಅವಶೇಷಗಳು ಪತ್ತೆಯಾಗಿದ್ದು, ಹೆಲಿಕಾಪ್ಟರ್ ಹಡಗನ್ನು ಸಮೀಪಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರಸ್ತುತ, ಐಸಿಜಿ ಶೋಧ ಕಾರ್ಯಾಚರಣೆಗಾಗಿ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳನ್ನು ಕಾರ್ಯಚರಣೆಗೆ ಇಳಿಸಲಾಗಿದೆ ಎಂದು ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

