Breaking News
Featured Video Play Icon

ಗ್ಯಾರಂಟಿ ವಿರುದ್ಧ ಜೈನಮುನಿ ಅಸಮಾಧಾನ: ರಾಜ್ಯ ಸರ್ಕಾರ ಪ್ರತಿ ಮನೆಯಲ್ಲೂ ಸಾರಾಯಿ ಸಿಗುವಂತೆ ಮಾಡಿದೆ..

ಹುಬ್ಬಳ್ಳಿ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಯ ವಿರುದ್ಧ ವರೂರಿನ ಗುಣಧರನಂದಿ ಮಹಾರಾಜರು ಅಸಮಾಧಾನ ಹೊರಹಾಕಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ಪ್ರತಿ ಮನೆಯಲ್ಲೂ ಸರಾಯಿ ಸಿಗುವಂತೆ ಮಾಡಿದೆ ಎಂದು ಗ್ಯಾರಂಟಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು ಈ ದೇಶದ ದೌರ್ಭಾಗ್ಯ ಮಾರುಕಟ್ಟೆಯಲ್ಲಿ ಎರಡೂ ಸಾವಿರ ಲೀಟರ್ ಹಾಲು ಸಿಗುವುದಿಲ್ಲ.‌ ಆದ್ರೆ ಎಂಟು ಸಾವಿರ ಸರಾಯಿ ಎಲ್ಲಿ ಬೇಕಾದ್ರು ಸಿಗುತ್ತದೆ.‌ ಸರ್ಕಾರಗಳು ಎಲ್ಲವನ್ನೂ ಫ್ರೀ ಕೊಟ್ಟು, ಪ್ರತಿ ಮನೆಯಲ್ಲಿಯೂ ಸರಾಯಿ ಸಿಗುವಂತೆ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಪ್ರತಿ ಮನೆ ಮನೆಗೆ ಒಂದು ಲೀಟರ್ ಹಾಲು ಫ್ರೀ ಕೊಡಬೇಕು. ಹಾಲು ಕುಡಿದು ದೇಶಕ್ಕೆ ಸಂಕಷ್ಟ ಬಂದಾಗ ಯುದ್ದಕ್ಕೆ ಹೋಗುವಂತೆ ಯುವಕರು ಗಟ್ಟಿಯಾಗಬೇಕು. ಆದ್ರೆ ಸಾರಾಯಿ ಕುಡಿದು ನಪುಂಸುಕರಾಗಿ ಮನೆಯಲ್ಲಿ ಕುಳಿತುಕೊಳ್ಳಬೇಡಿ ಎಂದು ಸಲಹೆ ನೀಡಿದರು.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *