ಉಕ್ರೇನ್: ಉಕ್ರೇನ್ ಮತ್ತು ರಷ್ಯಾ ಯುದ್ಧದ ಭೀಕರತೆಗೆ ಮತ್ತೆ ಮತ್ತೆ ಅಮೂಲ್ಯ ಮತ್ತು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅದರಲ್ಲೂ ತನ್ನ ಮೇಲೆ ಪದೇ ಪದೇ ಅಟ್ಯಾಕ್ ಮಾಡುತ್ತಿದೆ ಉಕ್ರೇನ್ ಸೇನೆ ಎಂದು ಆಕ್ರೋಶ ಹೊರ ಹಾಕುತ್ತಿದ್ದ ರಷ್ಯಾ ಮಿಲಿಟರಿ, ಇದೀಗ ದಿಢೀರ್ ಭಾರಿ ದೊಡ್ಡದಾಗಿ ದಾಳಿ ಆರಂಭ ಮಾಡಿದೆ. ಹೀಗಾಗಿ ಉಕ್ರೇನ್ ದೇಶದ ನೆಲ ಛಿದ್ರ ಛಿದ್ರವಾಗಿ ಹೋಗುತ್ತಿದ್ದು, ಇದೀಗ ರಷ್ಯಾ ಮಿಲಿಟರಿ ನಡೆಸಿದ ಅತ್ಯಂತ ಡೆಡ್ಲಿ ಕ್ಷಿಪಣಿ ದಾಳಿಯಲ್ಲಿ 41 ಜನ ಜೀವವನ್ನೇ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಗತ್ತಿನಲ್ಲಿ ಏನಾಗುತ್ತಿದೆಯೋ ಗೊತ್ತಿಲ್ಲ, ಒಂದು ಕಡೆ ಸಾಂಕ್ರಾಮಿಕ ರೋಗಗಳ ಕಾಟ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹಾಗೇ ಇನ್ನೊಂದು ಕಡೆ ಮನುಷ್ಯರು ಯುದ್ಧ ಮಾಡ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಶುರುವಾಗಿ 2 ವರ್ಷ ಮುಗಿದಿದೆ. ಕೆಲವೇ ದಿನಗಳಲ್ಲಿ 3ನೇ ವರ್ಷ ಮುಗಿಸಿ 4ನೇ ವರ್ಷಕ್ಕೆ ಕಾಲಿಡಲಿದೆ. ಹೀಗಿದ್ರೂ ಇಬ್ಬರ ನಡುವೆ ತಿಕ್ಕಾಟ ಶಾಂತವಾಗಿಲ್ಲ ಅದರ ಬದಲಾಗಿ, ದಿನದಿಂದ ದಿನಕ್ಕೆ ಹಿಂಸಾಚಾರ ಹೆಚ್ಚಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

