ಧಾರವಾಡ: ಇವತ್ತು ಮೂರು ಪಕ್ಷಗಳು ಮೂರು ಬಿಟ್ಟಿವೆ,ನಾಡಿನಲ್ಲಿ ಬರಗಾಲ, ರೈತರ ಸಮಸ್ಯೆ,ನೀರಿನ ಸಮಸ್ಯೆಗೆ ರಾಜೀನಾಮೆ ಕೊಡಲಿಲ್ಲ.ಇವತ್ತು 30 ಕೋಟಿ ಅಧಿಕಾರಕ್ಕೆ ರಾಜೀನಾಮೆ ನೀಡಿದ್ದಾರೆ, ಅಂತಹವರಿಗೆ ಚಿ..ಥೂ ಎಂದು ಉಗಿರಿ ಎಂದುಕರ್ನಾಟಕ ರಾಜ್ಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ನಗರದ ಕಲಾಭವನದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ಹಸಿರು ಸೇನೆ ವತಿಯಿಂದ ಸಾಲಗಾರ ನಾನಲ್ಲ, ಸಾಲ ನನ್ನದಲ್ಲ ಎಂಬ ಘೋಷ ವಾಕ್ಯದ ಮೂಲಕ 39 ನೇ ರೈತ ಹುತಾತ್ಮರ ದಿನಾಚರಣೆ ಹಾಗೂ ಬೃಹತ್ ರೈತ ಸಮಾವೇಶ ಉದ್ಘಾಟಿಸಿ,ಮಾತನಾಡಿದ ಅವರುರೈತ ಸಂಘಟನೆಯಲ್ಲಿ 54 ಪದಾಧಿಕಾರಿಗಳು ನೇತ್ರತ್ವದಲ್ಲಿ ಸಂಘ ಬಲಿಷ್ಠವಾಗಿದೆ.ಅವರಿಗೆಲ್ಲರೂ ಮಾತನಾಡಬೇಕು,ಆದರೆ ಅವರಿಗೆ ಅವಕಾಶ ಇಲ್ಲ,39 ನೇ ವರ್ಷದ ಹಿಂದೆ ನವಲಗುಂದ, ನರಗುಂದದಲ್ಲಿ ರೈತರಿಗೆ ಗುಂಡು ಹಾರಿಸಿದರು,ಆಗ ಗುಂಡು ಹಾರಿಸುವಷ್ಟು ಸಮಸ್ಯೆ ಇತ್ತ,ರೈತ ಮೇಲೆ ದಾಳಿಗೆ ಆಗಿನ ಅಧಿಕಾರಿಗಳು ಬ್ರಟಿಷ್ ರಿಗೆ ಹುಟ್ಟಿದ್ದರು.ಹಾಗಾಗೀ ರೈತರ ಮೇಲೆ ಗುಂಡು ಹಾಕಿದರು ಎಂದು ಕುಟುಕಿದರು.ರೈತರ ಹೊಲ ಗದ್ದೆಗಳಲ್ಲಿ ಮಾತ್ರ ಇರಬೇಕು ಎಂಬ ಉದ್ದೇಶದಿಂದ ರೈತರನ್ನ ಹದ್ದು ಬಸ್ತಿಲ್ಲಿಡಲು ಗುಂಡು ಹಾಕಲಾಯಿತು ಎಂದರು.ರೈತರ ಮಾತ್ರ ದುಡಿಯುವ ವರ್ಗದವರು ಅನ್ನ ಬೆಳೆ ಬೇಕು ಹಾಲು ಕರಿಬೇಕು,ಸರ್ಕಾರಗಳು ನೀನು ಹೊಲ ಗಧ್ಯದಲ್ಲಿ ಇರಬೇಕು ಎಂದು ಹೀಗಾಗಿ ನಂತರ ಸಂಘಟನೆ ಹುಟ್ಟುಹಾಕಿ ಸರಕಾರವನ್ನು ಕಿತ್ತು ಹಾಕಲಾಯಿತು ಎಂದು ರೈತ ಸಂಘದ ಮಹತ್ವ ಸಾರಿದರು.ನಂತರ ಮಾತನಾಡಿದ ಅವರು ರಾಜಕಾರಣಿಗಳು ನರಿಗಳು, ರಾಕ್ಷಸಸರು ತಮ್ಮ ಅಧಿಕಾರಕ್ಕ ರೆಸಾರ್ಟ್ ನಲ್ಲಿ ಕೂತಿದ್ದಾರೆ.ಯಾರಿಗೂ ಯಾರಿಗೂ ನಂಬಿಕೆ ಇಲ್ಲ ,ಇಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಭವಿಸಿದೆ, ರಾಜ್ಯದಲ್ಲಿ ಹೇಸಿಗೆ ರಾಜಕೀಯ ನಡೆದಿದೆ.ನಮ್ಮ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂರು ಅಪಾಯದ ತೀರ್ಮಾನವನ್ನು ಕೈಗೊಂಡಿದ್ದರು ಭೂಸ್ವಾದಿನ ಕಾಯ್ದೆಯನ್ನು ತಿದ್ದುಪಡೆ ತೆಗೆದುಕೊಂಡು ಬಂದು ರೈತರ ಭೂಮಿಗೆ ಅಪಾಯ ಹಂತಕ್ಕೆ ತಲುಪಿದೆ.ಈ ಬಗ್ಗೆ ಸಿದ್ದರಾಮಯ್ಯನವರಿಗೆ ಗೋತ್ತೆಯಿಲ್ಲ ಅಂತಾರೆ,ವಿರೋಧ ಪಕ್ಷದಲ್ಲಿರುವ ಯಡಿಯೂರಪ್ಪ ಅವರಿಗೆ ಕೇಳಿದರೆ ಗೊತ್ತೆಯಿಲ್ಲ ಅಂತಾರೆ.ಹಾಗಾದರೇ ನೀವು ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡ ಬಿಲ್ ಪಾಸ್ ಮಾಡಿದ್ದಿರಿ ಎಂದು ವಿರೋಧ ಪಕ್ಷದ ನಾಯರನ್ನು ಕುಟುಕಿದರು.ಜಿಂದಾಲಗೆ ಭೂಮಿ ಏಕೆ ಕೊಡಬೇಕು 11 ಸಾವಿರ ಎಕರೆಗೆ ಭೂಮಿ ಇದೆ.ಈ ಹಿಂದೆ ಜನಾರ್ದನ ರೆಡ್ಡಿ 4 ಲಕ್ಷದಂತೆ 5 ಸಾವಿರ ಎಕರೆ ಜಮೀನು ಖರೀದಿ ಮಾಡಿ ದುಬೈನ ಒಂದು ಕಂಪನಿಗೆ 10 ಲಕ್ಷ ಎಕರೆ ಅಂತೆ ಮಾರಿದರು ಇದರಿಂದ ಕೊಳೆ ಹೊಡೆದರು ಅದೇ ರೀತಿಯಲ್ಲಿ 1 ಲಕ್ಷ 58 ಸಾವಿರಕ್ಕೆ ಜಮೀನು ಜಿದಾಂಲಗೆ ಮಾರಾಟ ಮಾಡುವ ಮೂಲಕ ಡಿ.ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ನಾಟಕವನ್ನು ಕೊಳೆ ಹೊಡೆಯುತ್ತಿದ್ದಿರಿ ಎಂದರು.ಕೇಂದ್ರ ಸರಕಾರದ ಬಜೆಟ್ ಮಂಡಣೆ ಬಗ್ಗೆ ಮಾತನಾಡಿದ ಅವರು ಬಜೆಟ್ನಲ್ಲಿ ರೈತರಿಗೆ ಎನ್ನು ನೀಡಿದ್ದಾರೆ.ಕೃಷಿ ಉತ್ಪಾದನೆ ಹೆಚ್ಚಾಳಕ್ಕೆ ಹಣ ನೀಡಲಾಗಿದೆ.ರೈತರಿಗೆ ಕೇವಲ ದುಡಿಯಲು ಹಚ್ಚುತ್ತಿದ್ದಾರೆ. ರೈತರಿಗೆ ಮೋಸ ಮಾಡಿದ್ದಾರೆ ಹೀಗಾಗಿ ರೈತರ ಸಾಲವನ್ನು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಅವರೆ ಸಾಲಾ ತೀರಿಸಬೇಕುಮಹಿಳೆಯರು ಸಾಲವನ್ನು ಸರ್ಕಾರ ತಿರಿಸಿಬೇಕು ಎಂದರು.ದೊಡ್ಡ ಉದ್ಯಮಿಗಳ ಸಾಲ ಮನ್ನಾಮಾಡತಿರಿ ರೈತರು ಕಣ್ಣಿಗೆ ಕಾಣೋದಿಲ್ಲವಾ. ಬೆಂಬಲಬೆಲೇ ಯಾವ ಪುರುಷಾರ್ಥಕ್ಕೆ ಕೊಟ್ಟಿದ್ದಿರಿ ಸ್ವಾಮಿಗಳೇ ಎಂದು ಅಕ್ರೋಶ ವ್ಯಕ್ತಪಡಿಸಿದರು.ನಂತರ ಸಂಘದ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ,ಹುತಾತ್ಮರಾದ ರೈತರಿಗೆ ನಮನ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಭವಿಷ್ಯದ ಪೀಳಿಗೆಗಳಿಗೆ ಅನಕೂಲ ಆಗುವ ನಿಟ್ಟಿನಲ್ಲಿ ನಾವೇಲ್ಲ ಹೋರಾಟ ಮಾಡುವ ಮೂಲಕ ಸರಕಾರಕ್ಕೆ ರೈತರಿಗೆ ಬೇಕಾದ ಸೌಲಭ್ಯ ನೀಡಲು ಒತ್ತಾಯಿಸಲಾಗುವುದು ಎಂದರು.ರೈತ ಮುಖಂಡ ವಸಂತ ಕಾಂಬ್ಳೆ ಮಾತನಾಡಿ ರಾಜ್ಯದಲ್ಲಿ ಭೀಕರ ಬರಗಾಲ ಆಗಿದೆಹಳ್ಳಿ ಹಳ್ಳಿಯಲ್ಲಿ ಯುವಕರ ಪಡೆ ಕಟ್ಟಿ ಹೋರಾಟ ಮಾಡುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸಬೇಕಾಗಿದೆ ಎಂದರು.ನಂತರ ಪ್ರಧಾನ ಕಾರ್ಯದರ್ಶಿ ಮಾಹತೆಂಶ ಪೂಜಾರ ಮಾತನಾಡಿ ರೈತರು ಕೇವಲ ಸಮಸ್ಯಗೆ ಮನವಿ ಸಲ್ಲಿಸಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ,ಕೇವಲ ಹೋರಾಟ ಮಾಡಿಕೊಂಡು ಹೋದರೆ ಸಮಸ್ಯೆ ಬಗೆ ಹರಿಯುದಿಲ್ಲ, ನಾವೇಲರೂ ಸೇರಿ ವಿಧಾನಸೌದ ಮೆಟಿಲು ಹತ್ತಿದರೆ ಸಮಸ್ಯೆ ಬಗೆ ಹರಿಯುತ್ತದೆ,ಕಬ್ಬು ಬಾಕಿ ಸೇರಿದಂತೆ ಅನೇಕ ಸವಾಲುಗಳನ್ನು ರೈತರು ಎದುರಿಸುತ್ತಿದ್ದಾರೆ ಇಂದಿನ ಸಭೆಯಲ್ಲಿ ರಾಜ್ಯಪಾಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದರು.ಮಹಿಳಾ ಉಪಾಧ್ಯಕ್ಷರಾದ ಅನಸೂಯಮ್ಮ ಮಾತನಾಡಿ, ಅನ್ನದಾತರ ಮೇಲೆ ಗುಂಡು ಹಾಕಿದ್ದರಿಂದ ಸಂಘ ಉದ್ಘಾಟನೆ ಆಗಿದೆ. ಮೊದಲು ರೈತರಿಗೆ ಕಡಿಮೆ ಸಮಸ್ಯೆಗಳಿದ್ದವು, ಇಂದು ಸಮಸ್ಯೆಗಳ ಸರಮಾಲೆಯೇ ರೈತರ ಕೊರಳಿಗೆ ನೇತುಹಾಕಿಕೊಂಡಿದ್ದಾರೆ.ಆದರೇ ಇಂದು ಹಣ, ಅಧಿಕಾರಕ್ಕಾಗಿ ರಾಜಕೀಯ ನಾಯಕರು ಮಾರಿಕೊಂಡಿದ್ದಾರೆ. ಸ್ವಾಭಿಮಾನಿಗಳಾದ ನಾವು ಅವರಿಗೆ ಬುದ್ದಿ ಕಲಿಸಬೇಕು. ಕೆಂದ್ರ ಸರಕಾರ ತುಟಿಗೆ ತುಪ್ಪು ಹಚ್ಚುತ್ತಿದೆ. ನಮಗೆ ಸ್ವಾಮಿನಾಥನ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಮಂಜುನಾಥಗೌಡ, ಗಣೇಶ ಇಳಗಾರ ಮಾತನಾಡಿ, ರೈತ ಸಂಘಟನೆಗೆ ಕೋಡಿಹಳ್ಳಿ ಚಂದ್ರಶೇಖರ ಮುಖ್ಯಮಂತ್ರಿ. ಮಹಾದಾಯಿ ಸೇರಿದಂತೆ ಇತರ ಸಮಸ್ಯೆಗಳಿಗೆ ಕಟ್ಟುನಿಟ್ಟಿನ ಹೋರಾಟ ಮಾಡಬೇಕು. ಇನ್ನೂ ವರೆಗೂ 60 ಕೋಟಿ ಕಬ್ಬೂ ಬಾಕಿ ಇದೆ ಸರಕಾರ ನೀಡಬೇಕು ಎಂದು ಒತ್ತಾಯಿಸಿದರು.ಹಸಿರು ಸೇನೆ ಸಂಚಾಲಕ ಆನಂದ ಪಾಟೀಲ ಮಾತನಾಡಿ, ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೇ ನಮಗೆ ನಾಚಿಕೆ ಆಗುತ್ತದೆ. ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂಘಟನೆ ಮಾಡಿ ವಿಧಾನಸಭೆ ಪ್ರವೇಶ ಮಾಡಲು ಪರ್ಯಾಯ ಮಾರ್ಗ ಕಂಡಕೊಳ್ಳುಬೇಕು ಎಂದರು,ರೈತರ ಆತ್ಮಹತ್ಯೆ ಸರಕಾರದ ಹತ್ಯೆ. ರಾಜಕೀಯವಾಗಿ ರೈತರು ಬೆಳೆಯಬೇಕು.ಮುಂದಿನ ದಿನಗಳಲ್ಲಿ ನಾವೆಲ್ಲ ಹೆಚ್ವು ಸಂಘಟರಾಗಬೇಕು ..ಈ ವೇಳೆ ರಾಜ್ಯದ ವಿವಿಧ ಜಿಲ್ಲೆಯ ರೈತರ ಹಾಗೂ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಲಕ್ಷ್ಮಣಸ್ವಾಮಿ,ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಜೆ.ಕಾರ್ತಿಕ, ಫಾರೂಕ್ ಕಿಲ್ಲೇದಾರ, ಮಾಲತೇಶ ಪೂಜಾರ, ಭಕ್ತರಹಳ್ಳಿ ಬೈರೇಗೌಡ,ಚಂದ್ರಶೇಖರ ಕಬ್ಬೂರ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





