Breaking News

ಭೀಕರ ರಸ್ತೆ ಅಪಘಾತ: ನಾಲ್ವರು ಪಾದಚಾರಿಗಳು ಸಾವು

ವಿಜಯಪುರ : ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಾದಚಾರಿಗಳಿಗೆ ಬೈಕ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ, ಹಿಂಬದಿ ಸವಾರ, ರಸ್ತೆ ಬದಿ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ತಾಳಿಕೋಟೆ ತಾಲೂಕಿನ ಗೋಟಖಂಡಕಿ ನಿವಾಸಿ ನಿಂಗರಾಜ ಚೌದರಿ(32), ದೇವರಹಿಪ್ಪರಗಿ ತಾಲೂಕಿನ ಹಂಚಲಿ ನಿವಾಸಿ ಅನಿಲ್ ಖೈನೂರ (23) ಮಲಗಲದಿನ್ನಿ ಗ್ರಾಮದ ನಿವಾಸಿ ಉದಯಕುಮಾರ ಪ್ಯಾಟಿ(19) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಮತ್ತೊಬ್ಬ ಯುವಕ ರಾಯಪ್ಪ ಕೂಡ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *