Breaking News

ವಸ್ತುಗಳ ದರ ದುಪ್ಪಟ್ಟು ಏರಿಕೆ: ಮಾರುಕಟ್ಟೆಯಲ್ಲಿ ಭರ್ಜರಿ ಖರೀದಿ

ಬೆಳಗಾವಿ: ನಗರದ ಎಲ್ಲ ಮಾರುಕಟ್ಟೆಗಳಲ್ಲೂ ಶುಕ್ರವಾರ ಇಡೀ ದಿನ ಜನವೋ ಜನ ಚತುರ್ಥಿ ಸಿದ್ಧತೆಗಾಗಿ, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನ ಸಾಗರೋಪಾದಿಯಲ್ಲಿ ಮಾರುಕಟ್ಟೆಗೆ ಧಾವಿಸಿದರು. ಇದರಿಂದ ಎಲ್ಲ ವಸ್ತುಗಳ ದರವೂ ದುಪ್ಪಟ್ಟು ಏರಿಕೆಯಾಗಿದ್ದು ಕಂಡುಬಂತು.
ಇಲ್ಲಿನ ಕಾಕತಿವೇಸ್‌, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ರವಿವಾರ ಪೇಟೆ, ಮಾರ್ಕೆಟ್‌, ಕಿರ್ಲೊಸ್ಕರ್‌ ರಸ್ತೆ, ಖಡೇಬಜಾರ್‌, ರಾಮಲಿಂಗಖಿಂಡ ಗಲ್ಲಿ, ಕಂಬಳಿಕೂಟ ಸೇರಿದಂತೆ ಎಲ್ಲ ಕಡೆ ಜನಜಂಗುಳಿ ಕಂಡುಬಂತು ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹೈರಾಣಾದರು. ಪರಿಣಾಮ ರಾಣಿ ಚನ್ನಮ್ಮ ವೃತ್ತದಲ್ಲೇ ಎಲ್ಲ ವಾಹನಗಳಿಗೂ ತಡೆಯೊಡ್ಡಿದರು ಹಣ್ಣು, ಹೂವು, ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿಗಳ ಮಳಿಗೆಗಳ ಮುಂದೆ ಜನ ಕಿಕ್ಕಿರಿದು ಸೇರಿದರು. ರಾತ್ರಿ 11ರವರೆಗೂ ಖರೀದಿ ಭರಾಟೆ ಜೋರಾಗಿಯೇ ಇತ್ತು.
ಮನೆಗಳಲ್ಲಿ ಗಣಪತಿ ‍ಪ್ರತಿಷ್ಠಾ‍ಪಿಸುವ ಮಂಟಪ, ವಿದ್ಯುದ್ದೀಪಗಳ ಸರಮಾಲೆ, ಥರ್ಮೋಕೋಲ್‌ನಿಂದ ಮಾಡಿರುವ ಮಂಟಪಗಳು, ಬಣ್ಣದ ಕಾಗದಗಳು, ಪರಪರಿಗಳ ಖರೀದಿ ಜೋರಾಗಿ ನಡೆಯಿತು. ಎಲ್ಲ ಬಟ್ಟೆ, ವಾಹನ ಅಂಗಡಿಗಳಲ್ಲೂ ಖರೀದಿ ಭರ್ಜರಿಯಾಗಿ ನಡೆಯಿತು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *