Breaking News

ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಎಸ್ಕೆಪ್

ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ನ್ನು ಖದೀಮರು ಹೊತ್ತೊಯ್ದಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

ಉಪ್ಪಿನ ಬೆಟಗೇರಿ ಗ್ರಾಮದ ಬಸವರಾಜ ಪಟ್ಟಣಶೆಟ್ಟಿ ಎಂಬುವವರಿಗೆ ಸೇರಿದ ಬೈಕನ್ನೇ ಖದೀಮರು ಹೊತ್ತೊಯ್ದಿದ್ದಾರೆ. ಶನಿವಾರ ಸಂತೆಗೆಂದು ಬಸವರಾಜ ಬೈಕ್ ತೆಗೆದುಕೊಂಡು ಬಂದು ಮುತ್ತೂರ ಅವರ ಮನೆ ಎದುರು ನಿಲ್ಲಿಸಿ ಹೋಗಿದ್ದ. ಅಷ್ಟರಲ್ಲಾಗಲೇ KA-25 EY0473 ಸಂಖ್ಯೆಯ ಬೈಕ್‌ನ್ನು ಖದೀಮರು ತೆಗೆದುಕೊಂಡು ಹೋಗಿದ್ದಾರೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು, ಬೈಕ್ ಮಾಲೀಕರು ಇದೀಗ ಗರಗ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾರೆ.

Share News

About Shaikh BigTv

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *