Breaking News

ವಕ್ಫ್‌ ಆಸ್ತಿ ಸರ್ಕಾರದ್ದಲ್ಲ ಸಮಾಜದ ದಾನಿಗಳು ನೀಡಿದ್ದು: ಸಚಿವ ಜಮೀರ ಅಹ್ಮದ

ಬೆಂಗಳೂರು: ವಕ್ಫ್‌ ಆಸ್ತಿ ಸರ್ಕಾರದ್ದಲ್ಲ, ಸಮಾಜದ ದಾನಿಗಳು ನೀಡಿದ್ದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.
ವಿಧಾನಸೌಧದಲ್ಲಿ ನಡೆದ ಜಿಲ್ಲಾ ವಕ್ಫ್‌ ಅಧ್ಯಕ್ಷರು, ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ವಕ್ಫ್‌ ಆಸ್ತಿಯ ಒಂದು ಇಂಚೂ ಸರ್ಕಾರದಿಂದ ಪಡೆದಿಲ್ಲ ಸಮಾಜದ ಒಳಿತಿಗಾಗಿ ದಾನಿಗಳು ಉದಾರವಾಗಿ ನೀಡಿದ್ದಾರೆ. ದೇವರ ಆಸ್ತಿಯ ಸಂರಕ್ಷಣೆ ಸಮಾಜದ ಎಲ್ಲರ ಹೊಣೆ ಎಂದರು.
ವಕ್ಫ್‌ ಮಂಡಳಿಯಿಂದ 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಜಿಲ್ಲಾಮಟ್ಟದಲ್ಲಿ ನಡೆಸುವ ಅದಾಲತ್‌ನಿಂದ ಹಲವು ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್, ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಅನ್ವರ್‌ ಬಾಷಾ, ಸದಸ್ಯರಾದ ಯಾಕೊಬ್, ಮೌಲನಾ ಶಾಫಿ ಸಾದಿ, ರಿಯಾಜ್, ಅಸೀಫ್‌ ಉಪಸ್ಥಿತರಿದ್ದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *