Breaking News

ಚಂದ್ರನಲ್ಲಿ ಪರಮಾಣು ಘಟಕ ಸ್ಥಾಪಿಸಲು ರಷ್ಯಾಗೆ ಕೈಜೋಡಿಸಲಿರುವ ಭಾರತ, ಚೀನಾ

ನವದೆಹಲಿ: ಚಂದ್ರ ಮತ್ತು ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸಲು ಮನುಷ್ಯ ಪ್ರಯತ್ನಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿದ್ದು, ಭವಿಷ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಚಂದ್ರನಲ್ಲಿ ಮನುಷ್ಯನ ವಸಾಹತು ಸುಗಮವಾಗಿ ಆಗುವ ಸಲುವಾಗಿ ಪರಮಾಣು ವಿದ್ಯುತ್ ಘಟಕ ಸ್ಥಾಪಿಸಲು ರಷ್ಯಾ ಯೋಜಿಸುತ್ತಿದೆ. ಈ ಯೋಜನೆಗೆ ಚೀನಾ ಮತ್ತು ಭಾರತ ದೇಶಗಳು ರಷ್ಯಾ ಜೊತೆ ಕೈ ಜೋಡಿಸುತ್ತಿವೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ಮೊದಲ ದೇಶ ಎನಿಸಿರುವ ಭಾರತ ಮುಂದಿನ ವರ್ಷಗಳಲ್ಲಿ ಚಂದ್ರನ ನೆಲಕ್ಕೆ ಮನುಷ್ಯರನ್ನು ಕಳುಹಿಸುವ ಗುರಿ ಹೊಂದಿದೆ. ಹಾಗೆಯೇ, ಲೂನಾರ್ ಬೇಸ್ ಸ್ಥಾಪಿಸುವ ಇರಾದೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಚಂದಿರನ ಮೇಲೆ ಪರಮಾಣ ವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯಲ್ಲಿ ಭಾಗಿಯಾಗುವುದು ಭಾರತಕ್ಕೆ ಅನುಕೂಲವಾಗಲಿದೆ.
ರಷ್ಯಾದ ಪರಮಾಣು ಶಕ್ತಿ ನಿಗಮವಾದ ರೋಸಟೋಮ್ ನೇತೃತ್ವದಲ್ಲಿ ಈ ಲೂನಾರ್ ಪವರ್ ಪ್ರಾಜೆಕ್ಟ್ ನಡೆಯಲಿದೆ. ಅರ್ಧ ಮೆಗಾವ್ಯಾಟ್​ನಷ್ಟು ವಿದ್ಯುತ್ ಉತ್ಪಾದನೆ ಮಾಡಬಲ್ಲಂತಹ ಪರಮಾಣ ಸ್ಥಾವರ ನಿರ್ಮಿಸುವ ಗುರಿ ಇದೆ. ಭವಿಷ್ಯದಲ್ಲಿ ರೂಪಿಸಲಾಗುವ ಮಾನವರ ನೆಲೆಯಲ್ಲಿನ ಚಟುವಟಿಕೆಗಳಿಗೆ ಇದು ನೆರವಾಗಬಹುದು ಎನ್ನಲಾಗಿದೆ. ರೋಸಟೋಮ್​ನ ಮುಖ್ಯಸ್ಥ ಲಿಖಾಚೆವ್ ಅವರು ಈ ರಷ್ಯನ್ ಯೋಜನೆಯಲ್ಲಿ ಪಾಲ್ಗೊಳ್ಳಲು ಭಾರತ ಮತ್ತು ಚೀನಾ ದೇಶಗಳು ಆಸಕ್ತಿ ತೋರಿರುವ ವಿಚಾರವನ್ನು ತಿಳಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *