Breaking News

ವಿದೇಶದಲ್ಲಿ ಭಾರತೀಯ ಸಂಪ್ರದಾಯ ಆಚರಣೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮಣಕವಾಡದ ಶಶಿ ಚಾಕಲಬ್ಬಿ, ಸಾನ್ವಿ ಚಾಕಲಬ್ಬಿ ಎಂಬುವವರೇ ಅಮೇರಿಕಾದ ಸ್ಯಾನ್-ಡಿಯಾಗೋ ನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಮಹತ್ವದ ಸಂದೇಶವನ್ನು ಸಾರಿದ್ದಾರೆ.

ಈ ಹಿಂದೆಯೂ ಕೂಡ ಈ ದಂಪತಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಮನೆಯಲ್ಲಿಯೇ ರಾಮಮಂದಿರ ನಿರ್ಮಾಣ ಮಾಡಿ ಪೂಜೆ ಕೂಡ ಮಾಡಿದ್ದರು. ಈ ಬಾರಿ ಗಣೇಶೋತ್ಸವಕ್ಕೆ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಸಿ ನೆರೆ ಹೊರೆಯವರಿಗೆ ಪ್ರಸಾದ ವಿತರಣೆ ಮಾಡಿ ಸಂಭ್ರಮಿಸಿದ್ದಾರೆ.

ಇನ್ನೂ ಅನಿವಾಸಿ ಭಾರತೀಯರಲ್ಲಿ ಇಂದಿಗೂ ಕೂಡ ಭಾರತೀಯ ಸಂಪ್ರದಾಯಗಳು ಉಳಿದು ಬೆಳೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೆ ದೂರ ದೇಶದಲ್ಲಿದ್ದರೂ ಆಚರಣೆಗಳನ್ನು ದೂರ ಮಾಡದೇ ಇರುವ ದಂಪತಿ ಕಾರ್ಯ ನಿಜಕ್ಕೂ ಪ್ರಶಂಸೆಗೆ ಪಾತ್ರವಾಗಿದೆ.

Share News

About bigtvnews22

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *