ಪೋಲಿಸ್ ಕಮೀಷನರ್ ಆಗಿ ಎಡಾ ಮಾರ್ಟಿನ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಹಲವು ಐಪಿಎಸ್ ಅಧಿಕಾರಿಗಳ ಹೆಸರುಗಳು ಕೂಡ ಅವಳಿ ನಗರದ ಕಮೀಷನರ್ ಆಗುತ್ತಾರೆ ಎಂದು ಕೇಳಿ ಬಂದಿತ್ತು,ಆದ್ರೆ ಈ ಎಲ್ಲದರ ನಡುವೆ ಮುಂಚೂಣಿಯಲ್ಲಿದ್ದ ಎಡಾ ಮಾರ್ಟಿನ್ ಅವರು ಅಧಿಕೃತವಾಗಿ ಹು-ಧಾ ಪೊಲೀಸ್ ಕಮೀಷನರ್ ಆಗಿದ್ದಾರೆ.

ಕರ್ನಾಟಕದ ಭಾಗಲಕೋಟಿ,ಹಾಸನ, ರಾಮನಗರ, ಅಷ್ಟೇ ಅಲ್ಲದೇ ಬೆಂಗಳೂರಿನ ಲೋಕಾಯುಕ್ತ ಎಸ್ಪಿಯಾಗಿ ತಮ್ಮದೆಯಾದ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮದೇ ಛಾಪು ಮೂಡಿಸಿರುವ ಎಡಾ ಮಾರ್ಟಿನ್ ಇಂದಿನಿಂದ ಹು-ಧಾ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಇನ್ನು ಅವಳಿ ನಗರದಲ್ಲಿ ನಡೆಯುತ್ತಿರೋ ಅಕ್ರಮ ಚಟುವಟಿಕೆಗಳಿಗೆ ಹಾಗೂ ಇಲ್ಲಿನ ಕಾನೂನು ಸುವ್ಯವಸ್ಥೆ ಯನ್ನು ಹತೋಟಿಯಲ್ಲಿ ಇಡುತ್ತಾರಾ ? ಎಂಬುದನ್ನು ಇದೀಗ ಹುಬ್ಬಳ್ಳಿ- ಧಾರವಾಡ ಜನತೆ ಕಾದುನೋಡಬೇಕಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





