ಹುಬ್ಬಳ್ಳಿ: ಕಾಂಗ್ರೇಸ್ 5 ಮಂದಿ ಟೀಮ್ ಅಲ್ಲ 500 ಮಂದಿ ಟೀ ಮಾಡ್ರಿ. ಸುಮ್ಮನೆ ಹೇಳುತ್ತೇನೆ.. ಹೇಳುತ್ತೇನೆ ಅಂತ ಗಾಳಿಯಲ್ಲಿ ಗುಂಡು ಹೊಡಿಯೋ ಕೆಲಸ ಮಾಡಬೇಡಿ. ನಮ್ಮದು ಏನ್ ಐತಿ ಸ್ಕ್ಯಾಮ್ ಅದನ್ನು ತೆಗಿರಿ ಮೊದಲು ನೋಡೋಣ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವಂತ ಕೆಲಸ ಮಾಡಬೇಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬಿಜೆಪಿ ಹಗರಣದ ತನಿಖೆಗಾಗಿ ಕಾಂಗ್ರೆಸ್ 5 ಸಚಿವರ ತಂಡವನ್ನು ರಚನೆ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇವಾಗ ನೀವು ಒಳಗೆ ಹೋಗುವಂತ ಪ್ರಸಂಗಗಳು ಬರುತ್ತಿದ್ದಾವೆ. ಸರ್ಕಾರ ಒಂದು ವರ್ಷ ಆಯ್ತಲ್ಲ ಎಷ್ಟು ದಿನ ಏನು ಉಪ್ಪಿನಕಾಯಿ ಹಾಕ್ತಾ ಇದ್ದೀರಾ. ಇವತ್ತು ಇಡೀ ರಿಪೋರ್ಟಲ್ಲಿ ಏನ್ ಬಂತು ನಿಮ್ಮ ಸಚಿವರು ಆರೋಪಿ ಇದ್ದಾರೆ. ನಿಮ್ಮ ಶಾಸಕರ ಆರೋಪಿಗಳಿದ್ದಾರೆ ಮೊದಲು ಅವರನ್ನ ಒಳಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





