ಹುಬ್ಬಳ್ಳಿ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರಿಯಾಗಿಯೇ ಹೇಳಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದರ್ಶನ್ ಪುಟ್ಟಣ್ಣಯ್ಯ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಸಂಗತಿ. ಇದು ಕಾಂಗ್ರೆಸ್ ಪಾರ್ಟಿಯ ಶಾಸಕರಿಂದ ಹಿಡಿದುಕೊಂಡು ಎಲ್ಲಾ ಪಾರ್ಟಿಯ ಶಾಸಕರಿಗೂ ಬಹಳ ತೊಂದರೆ ಆಗ್ತಾ ಇದೆ ಎಂದರು.
ಡೆವಲಪ್ಟೆಂಟ್ ಎಂಬುವುದು ಮರೀಚಿಕೆಯಾಗಿ ಹೋಗುವಂತ ಸಂದರ್ಭ ಬಂದಿದೆ. ಒಂದು ವರ್ಷದಿಂದ ಒಂದು ರೂಪಾಯಿ ಬಿಡುಗಡೆ ಆಗಲಾಗದಂತದ್ದು ಕಾಮಗಾರಿಗಳಿಗೆ ಸಿಗಲಾರದಂತ ಪರಿಸ್ಥಿತಿಗೆ ಸರ್ಕಾರ ಬಂದು ನಿಂತಿದೆ ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

