ಅಣ್ಣಿಗೇರಿ: ಪುರಸಭೆ ಸದಸ್ಯ ಶಿವಾನಂದ ಬೆಳಹಾರ ಅವರು ಲೇಔಟ್ ಪರ್ಮಿಷನ್ ಒಳಗೆ ಹಣ ಪಡೆದಿದ್ದಾರೆ ಎಂದು ಸದಸ್ಯ ನಾಗರಾಜ್ ದಳವಾಯಿ ಅವರ ಮೇಲೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸದಸ್ಯ ನಾಗರಾಜ್ ಅವರು ಮಾತನಾಡಿ ಪರ್ಮಿಷನ್ ಕೊಡುವುದರಲ್ಲಿ ನಾನು ಹಣ ತೆಗೆದುಕೊಂಡಿದ್ದು ಸಾಬೀತುಪಡಿಸಿದರೆ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು.
ಅವರು ಪುರಸಭೆ ಸಾಮಾನ್ಯ ಸಭೆ ಬಳಿಕ ಮಾಧ್ಯಮದ ಜೊತೆ ಮಾತನಾಡಿ ನಾನು ಹಣ ಪಡೆದಿದ್ದು ಸಾಕ್ಷಿ ಇದ್ದರೆ ತೆಗೆದುಕೊಂಡು ಬನ್ನಿ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಹಾಗೂ ನಿಮ್ಮದೇನಾದರೂ ನಾವು ಸಾಬೀತುಪಡಿಸಿದರೆ ನೀವು ರಾಜೀನಾಮೆ ಕೊಡಲು ಸಿದ್ದರಿದ್ದೇವೆ ಎಂದು ಪ್ರಶ್ನೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

