Breaking News

ಕೆಡಿಪಿ ಸಭೆ : ಗರಂ ಆದ ಸಂತೋಷ ಲಾಡ್

ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

ಈ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಅವರು ಕೆಲ ಅಧಿಕಾರಿಗಳ ಮೇಲೆ ಅಕ್ಷರಶಃ ಗರಂ ಆದರು. ತೋಟಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿ ಬಗ್ಗೆ ದಿನಚರಿ ಬರೆದಿಡುವ ವಿಚಾರಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಚಿವರು ಫುಲ್ ತರಾಟೆಗೆ ತೆಗೆದುಕೊಂಡರು.

ಇಲಾಖೆಯಲ್ಲಿ ಸರಿಯಾಗಿ ದಿನಚರಿ ಬರೆದಿಡದ ಹಿನ್ನೆಲೆ ಅಧಿಕಾರಿಗಳು ಸಚಿವರಿಗೆ ಸಬೂಬು ಹೇಳಲು ಮುಂದಾದರು. ನಿಮ್ಮ ಸಿಬ್ಬಂದಿಯ ದಿನಚರಿ ಎಲ್ಲಿದೆ ಕೊಡಿ ಎಂದು ಸಚಿವರು ಅಧಿಕಾರಿಗಳನ್ನು ಕೇಳಿದಾಗ ಅಧಿಕಾರಿಗಳು ಸಮರ್ಪಕ ಉತ್ತರ ಕೊಡಲು ತಡವರಿಸಿದರು. ಸಬೂಬು ಹೇಳಲು ಮುಂದಾದ ಅಧಿಕಾರಿಗಳಿಗೆ ಸಚಿವರು ಯೂ ಸ್ಟುಪಿಡ್ ಎಂದು ಗದರಿದ ಪ್ರಸಂಗ ನಡೆಯಿತು.ಸಬೂಬು ಹೇಳಲು ಬಂದ ಅಧಿಕಾರಿಗಳಿಗೆ ಹೋಗಿ ಕೂಳ್ಕೊಳ್ಳಿ ಎಂದು ಗದರಿದರು.

Share News

About Shaikh BigTv

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *