Breaking News

8 ರಂದು ಬಸವರಾಜ ಡೋಣೂರ ಅವರ ಕುರಿತು ವಿಚಾರ ಸಂಕಿರಣ.

ಧಾರವಾಡ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕನ್ನಡ ಲೇಖಕರಾಗಿ ಸಾಮಾಜಿಕ ಚಿಂತಕರಾಗಿ ಮತ್ತು ಶೈಕ್ಷಣಿಕ ಆಡಳಿತಗಾರರಾಗಿ ಕರ್ನಾಟಕ ಮತ್ತು ಭಾರತದಲ್ಲಿ ತಮ್ಮದೇ ಆದ ಸ್ಥಾನ, ಶಿಷ್ಯವೃಂದ ಮತ್ತು ಗೆಳೆಯರ ಬಳಗ ಕಟ್ಟಿಕೊಂಡಿರುವ ಬಸವರಾಜ ಡೋಣೂರ ಅವರ ಸಾಹಿತ್ಯ ಮತ್ತು ಬದುಕಿನ ಕುರಿತು ಒಂದು ದಿನದ ವಿಚಾರ ಸಂಕಿರಣ, ಡೋಣಿ ಸಾಲು, A Melting Pot ಕೃತಿಗಳ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ದಿ 08 ರಂದು , ಬೆಳಿಗ್ಗೆ 9.30 ಘಂ ಧಾರವಾಡದ ಆಲೂರು ವೆಂಕಟರಾವ ಸಭಾ ಭವನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಡಾ ಡಿ ಎಮ್ ಹಿರೇಮಠ ತಿಳಸಿದರು
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಂಗಪವೇಶ ಕೃತಿಯ ಮೂಲಕ ವಿಮರ್ಶಕರಾಗಿ ಕನ್ನಡ ಸಾಹಿತ್ಯ ಪ್ರವೇಶಿಸಿ ಮೊದಲ ಕೃತಿಯಿಂದಲೇ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಗಟ್ಟಿ ಹೆಜ್ಜೆ ಮೂಡಿಸಿದ ಡೋಣೂರರು ಸೀಳು ನೋಟಗಳು, ಹೊಸದಾರಿ, ಕನ್ನಡ ನಾಟಕ ಮತ್ತು ರಂಗಭೂಮಿ, ಒಳಗಣ ಹೊರಗಣ, ನೋಟ ನಿಲುವು ( ನಾಲ್ಕು ಸಂಪುಟಗಳು), ಕರ್ಪೂರದ ಗಿರಿ, ಬಯಲ ಬೆರಗು, ಉರಿಯುಂಡ ಕರ್ಪೂರ ಮುಂತಾದ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದರು. ತಬಲಜಿ, ಹಾವು ತುಳಿದನೇ, ಪರಿಹಾರ, ಚಾಂದನಿ ಚೌಕ್, ವಾಟರ್ ಮಾಸ್ಟರ್ ವಾಟರ್ ಮತ್ತು ದಶಕದ ಕಥೆಗಳನ್ನ ಪುಕಟಿಸಿದರು.ಉರಿವ ಕೆಂಡದ ಮೇಲೆ ಕಾದಂಬರಿಯನ್ನು ಕಸ್ತೂರಿಯ ಮೃಗ ಮತ್ತು ಕಂಗಳ ಬರ ಕವನ ಸಂಕಲನಗಳನ್ನು ಪ್ರಕಟಿಸಿದರು. ಶಬರಿ, ಅಪ್ಪ, ಗುಣಮುಖ, ಜಂಗೀ ಕುಲಪತಿಯ ಜಂಗೀಕಥ ಈ ಕೃತಿಗಳನ್ನು Cod. The Folk Theatre of Karnataka: A Study, The Poetry of G M Hopkins and Basavanna: A Comparative Study ಈ ಇಂಗ್ಲಿಷ್ ಕೃತಿಗಳನ್ನು ಪ್ರಕಟಿಸಿದರು.

ಎರಡು ದಶಕಗಳಿಗಿಂತಲೂ ಅಧಿಕ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿರುವ ಡೋಣೂರ ಅವರುವಿಭಾಗದ ಮುಖ್ಯಸ್ಥರಾಗಿ, ನಿಕಾಯದ ಡೀನ್ ಆಗಿ, ಪರೀಕ್ಷಾಂಗದ ಕುಲಸಚಿವರಾಗಿ,ವಿಶ್ವವಿದ್ಯಾಲದ ಕುಲಸಚಿವರಾಗಿ ಕಾರ್ಯಭಾರ ನಿರ್ವಹಿಸಿದರು. ಧಾರವಾಡ ಕಟ್ಟೆ ಕಟ್ಟಿ, ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಅನುವಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

. ಡಾ. ಬಾಳಾಸಾಹೇಬ ಲೋಕಾಪುರ ಆಶಯ ನುಡಿ ಆಡಲಿದ್ದು ಮಲ್ಲಿಕಾರ್ಜುನ ಹಿರೇಮಠರು ಅಧ್ಯಕ್ಷತೆ ವಹಿಸಲಿದ್ದಾರ. ಮೊದಲ ಗೋಷ್ಠಿಯಲ್ಲಿ ಡಾ.ರಾಜಶೇಖರ ಹಳಮನ ಡೋಣೂರರ ವಿಮರ್ಶಾ ಸಾಹಿತ್ಯದ ಕುರಿತು ಮತ್ತು ಡಾ. ರಾಜಣ್ಣ ಡೋಣೂರರ ಅನುವಾದ ಮತ್ತು ಸಂಪಾದನಾ ಸಾಹಿತ್ಯದ ಕುರಿತು ಮಾತನಾಡಲಿದ್ದಾರೆ. ಎರಡನೆಯ ಗೋಷ್ಠಿಯಲ್ಲಿ ಡಾ ಗುರುಪಾದ ಮರಿಗುದ್ದಿ ಡೊಣೂರರ ಕಥಾ ಸಾಹಿತ್ಯ, ಡಾ. ಮಲ್ಲಿಕಾರ್ಜುನ ಮೇಟಿ ಕಾದಂಬರಿಯ ಕುರಿತು ಮತ್ತು ಗೀತಾ ವಸಂತ ಅವರ ಕಾವ್ಯದ ಕುರಿತು ಮಾತನಾಡಲಿದ್ದಾರೆ.

ಡೋಣೂರರ ಕರ್ತೃತ್ವ ಮತ್ತು ವ್ಯಕ್ತಿತ್ವ ಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷತೆಯನ್ನು ರಾಘವೇಂದ್ರ ಪಾಟೀಲರು ವಹಿಸಲಿದ್ದು ಡಿ ಎಂ ಹಿರೇಮಠ, ಬಿ ಬಿ ಪೂಜಾರಿ, ಲಿಂಗರಾಜ ಅಂಗಡಿ, ಡಿ ಜಿ ಹಾಜವಗೋಳ, ರಾಜಶೇಖರ ಮಠಪತಿ, ವೆಂಕಟಗಿರಿ ದಳವಾಯಿ, ಆಶೀಷ್ ಮಾಥರ, ಜ್ಞಾನೇಂದ್ರ ಬಹದೂರ ಸಿಂಗ ಜೊಹರಿ, ಮುಕುಂದ ಲಮಾಣಿ ಮತ್ತು ಗೀತಾ ರಾಠೋಡ ಮಾತನಾಡಲಿದ್ದಾರೆ ಎಂದರು.

ಸಂಜೆ ಐದು ಗಂಟೆಗೆ ಜರುಗಲಿರುವ ಗ್ರಂಥಗಳ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ಭಾರತ ಸರ್ಕಾರದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಮಾನ್ಯ ಪುಲ್ಹಾದ ಜೋಶಿ ಅವರು ಉದ್ಘಾಟಿಸಲಿದ್ದು, ಸಂಸ್ಕೃತಿ ಚಿಂತಕ ಮಾನಅರವಿಂದ ದೇಶಪಾಂಡೆ, ರಾಷ್ಟ್ರೀಯ ಸ್ವಾಭಿಮಾನಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಬಸವರಾಜ ಪಾಟೀಲ ವಿರಾಪುರ), ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಕೆ . ಬಿ.ಗುಡಸಿ, ಕೇಂದ್ರ ಸಾಹಿತ್ಯ ಅಕಾದಮಿಯ ಸದಸ್ಯ ಡಾ. ಮನು ಬಳಿಗಾರ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ ಶಹಪುರ ಮತ್ತು ಆಕ್ಸ್‌ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಸಿದರು.

ಡಾ ವಿ ಎಸ್ ಕಟಗಿಹಳ್ಳಿಮಠ,ಡಾ ಗಣೇಶ ಪವಾರ ,ಡಾ ಡಿ ಜಿ ಹಾಜನಗೋಳ, ಡಾ ಮುಕುಂದ ಲಮಾಣಿ, ಶ್ರೀನಿವಾಸ ಸೂರಟೂರ್,ಡಾ ಪ್ರಭಾಕರ ಕಾಂಬಳೆ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *