ನವದೆಹಲಿ: ಹೆಲಿಕಾಫ್ಟರ್ ನಲ್ಲಿ ಹೊತ್ತೊಯ್ಯಬಹುದಾದ ವೈವಿದ್ಯಮಯ ಲಘು ಯುದ್ಧ ಟ್ಯಾಂಕರ್ ಜೋರಾವರ್ ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದ್ದು, ಶೀಘ್ರದಲ್ಲೇ ಗಡಿ ಪ್ರದೇಶಗಳಲ್ಲಿ ನಿಯೋಜನೆಗೊಳ್ಳಲಿದ್ದು, ಭಾರತದ ಬಲ ಹೆಚ್ಚಿಸಲಿದೆ.
ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಮರುಭೂಮಿಯಲ್ಲಿ ಜೋರಾವರ್ ಹಗುರ ಯುದ್ಧ ಟ್ಯಾಂಕರ್ ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಹಲವು ಉದ್ದೇಶಿತ ಗುರಿಗಳನ್ನು ಯಶಸ್ವಿಯಾಗಿ ತಲುಪಿದ್ದೂ ಅಲ್ಲದೇ ನಿರೀಕ್ಷೆಗೂ ಮೀರಿದ ಕಾರ್ಯಕ್ಷಮತೆ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ಕಡಿದಾದ ಪ್ರದೇಶಗಳಲ್ಲಿ, ಪರ್ವತಗಳ ನಡುವೆ ನಿರಾಯಸವಾಗಿ ಸಾಗಬಲ್ಲ ಈ ಯುದ್ಧ ಟ್ಯಾಂಕರ್ ಅನ್ನು ಹೆಲಿಕಾಫ್ಟರ್ ನಲ್ಲಿ ಕೂಡ ಸಾಗಿಸಬಹುದಾಗಿದೆ. ಇದರಿಂದ ಚೀನಾ ಗಡಿಯಲ್ಲಿ ಭಾರತದ ಈ ಟ್ಯಾಂಕರ್ ನಿಯೋಜಿಸುವ ಮೂಲಕ ಗಡಿ ಕಾವಲು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ.
ಭಾರತೀಯ ಲಘು ಟ್ಯಾಂಕರ್ ಯಶಸ್ವಿ ಪ್ರಯೋಗಗಳು ಯಶಸ್ವಿಯಾಗಿದ್ದು, ಇದು ಆಧುನಿಕ ತಂತ್ರಜ್ಞಾನ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡ ಸ್ವಾವಲಂಬನೆಯ ಭಾರತ ಕಲ್ಪನೆಯ ಗುರಿ ತಲುಪಲು ಮಹತ್ವದ ಮೈಲಿಗಲ್ಲು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

