Breaking News

ಲಂಡನ್ ನ ಲ್ಯಾಂಬೆತ್​​ ಬಸವೇಶ್ವರ ಸ್ಮಾರಕ ದಶಮಾನೋತ್ಸವಕ್ಕೆ ಪ್ರಧಾನಿ ಮೋದಿಗೆ ಆಹ್ವಾನ

ಬೆಂಗಳೂರು: ಲಂಡನ್​​ನಲ್ಲಿರುವ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ದಶಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲು ಸಂಸ್ಥೆ ಚಿಂತನೆ ನಡೆಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಹಿರಿಯ ಬಿಜೆಪಿ ನಾಯಕ, ಸಂಸದ ಬಸವರಾಜ ಬೊಮ್ಮಾಯಿ ಮೂಲಕ ಮೋದಿ ಅವರಿಗೆ ಆಹ್ವಾನ ನೀಡಲು ಸಂಸ್ಥೆ ಉದ್ದೇಶಿಸಿದೆ ಎಂಬುದು ತಿಳಿದುಬಂದಿದೆ.
ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ಸಂಸ್ಥೆ ಆಹ್ವಾನದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಸದ್ಯ ಕುಟುಂಬ ಸಮೇತ ಲಂಡನ್​ಗೆ ಭೇಟಿ ನೀಡಿದ್ದಾರೆ. ಲಂಡನ್​​ನಲ್ಲಿರುವ ಬಸವೇಶ್ವರ ಮೂರ್ತಿಗೆ ನಮನ ಸಲ್ಲಿಸಿದ್ದಾರೆ.
ಇದೇ ವೇಳೆ, ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ದಶಮಾನೋತ್ಸವ ಆಚರಣೆ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಫೌಂಡೇಶನ್​ ನಿರ್ಧರಿಸಿದೆ. ಈ ಬಗ್ಗೆ ಬೊಮ್ಮಾಯಿ ಬಳಿ ಆಹ್ವಾನ ಪತ್ರ ನೀಡಿದೆ. ಪ್ರಧಾನಮಂತ್ರಿಗಳಿಗೆ ಆಹ್ವಾನ ಪತ್ರ ಹಸ್ತಾಂತರಿಸಲು ಬೊಮ್ಮಾಯಿಗೆ ವಿನಂತಿಸಿದೆ ಎಂದು ಮೂಲಗಳು ತಿಳಿಸಿವೆ.
ಲಂಡನ್​​ನಲ್ಲಿರುವ ಬಸವೇಶ್ವರ ಪ್ರತಿಮೆಗೆ ನಮನ ಸಲ್ಲಿಸಿದ ಬಗ್ಗೆ ಬಸವರಾಜ ಬೊಮ್ಮಾಯಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *