Breaking News

ಭತ್ತದ ಕಟಾವಿಗೆ ಮುನ್ನವೇ ಉತ್ತಮ ಬೇಡಿಕೆ….

ರಾಯಚೂರು: ಮಳೆಯ ಅಭಾವದ ನಡುವೆಯೂ ರೈತರು ಪ್ರಯಾಸಪಟ್ಟು ಬೆಳೆದ ಭತ್ತಕ್ಕೆ ಕಟಾವಿಗೆ ಮುನ್ನವೇ ಉತ್ತಮ ಬೇಡಿಕೆ ಬಂದಿದೆ. ವಿವಿಧ ತಳಿಯ 75 ಕೆ.ಜಿ. ಭತ್ತದ ದರ ₹1,900ರಿಂದ ₹ 2,100ರವರೆಗೂ ತಲುಪಿದೆ. ಕಳೆದ ವರ್ಷ ₹1,750 ಇತ್ತು. ಮುಂಗಾರು ಹಂಗಾಮಿನಲ್ಲಿ ಸಿಂಧನೂರು ತಾಲೂಕಿನಲ್ಲಿ 56,413 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ತುಂಗಭದ್ರಾ ಕಾಲುವೆಯ ಮೇಲ್ಭಾಗದಲ್ಲಿ ಈಗಾಗಲೇ ಭತ್ತದ ಕಟಾವು ಪ್ರಾರಂಭವಾಗಿದೆ. ಆದರೆ, ಮಧ್ಯ ಹಾಗೂ ಕೆಳ ಭಾಗದಲ್ಲಿ ತೆನೆ ಕೆಂಪಗಾಗಿದ್ದು, ತಿಂಗಳಲ್ಲಿ ಕಟಾವು ಶುರುವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಭತ್ತ ಬೆಳೆಯ ಇಳುವರಿ ಚೆನ್ನಾಗಿತ್ತು. ಭತ್ತ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಕಾರಣ ಬೇಡಿಕೆ ಕಡಿಮೆ ಇತ್ತು. ಈ ಬಾರಿ ಬರ ಇರುವ ಕಾರಣ ಭತ್ತದ ಇಳುವರಿಯೂ ಕಡಿಮೆಯಾಗಿದೆ. ಕಳೆದ ವರ್ಷ 75 ಕೆಜಿ ಭತ್ತ ₹1750ರವರೆಗೆ ಮಾರಾಟವಾಗಿದೆ. ಈ ಬಾರಿ ಸೋನಾಮಸೂರಿ ₹1,900, ಆರ್‌ಎನ್‍ಆರ್ ₹2,100 ದರ ಇದೆ’ ಎಂದು ಸಿಂಧನೂರಿನ ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ ವಿವರಿಸುತ್ತಾರೆ

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *