Breaking News

ಮಾದಕ ವಸ್ತು ಮಾರಾಟ : ನೈಜೀರಿಯಾ ಮೂಲದ ಪ್ರಜೆ ವಶಕ್ಕೆ

ಧಾರವಾಡ:ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಪ್ರಜೆಯೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ ಅಧಿಕಾರಿಗಳು ಧಾರವಾಡದಲ್ಲಿ ಆತ ಇದ್ದ ಮನೆಯಲ್ಲಿ ಪರಿಶೀಲನೆ ನಡೆಸಿದರು.

ನೈಜೀರಿಯಾ ಮೂಲದ ಈ ವ್ಯಕ್ತಿ ಧಾರವಾಡ ಮಾಳಮಡ್ಡಿ ಬಡಾವಣೆಯೊಂದರಲ್ಲಿ ಹಲವು ವರ್ಷಳಿಂದ ವಾಸವಾಗಿದ್ದ. ಅಲ್ಲಿದ್ದುಕೊಂಡೇ ಹೆಣ್ಣು ಮಕ್ಕಳ ಪರ್ಸ್ ಮಾರಾಟ ಮಾಡುವ ನೆಪದಲ್ಲಿ ಕೊಕೆನ್ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಆತನ ಮನೆಯಲ್ಲಿ ಕೊಕೆನ್ ತೂಕ ಮಾಡುವ ಯಂತ್ರ, ಪ್ಯಾಕಿಂಗ್ ಮಶಿನ್ ಜೊತೆಗೆ ಹೆಣ್ಣು ಮಕ್ಕಳು ಬಳಕೆ ಮಾಡುವ ಅನೇಕ ಬ್ಯಾಗ್‌ಗಳು ಆತನ ಮನೆಯಲ್ಲಿ ಪತ್ತೆಯಾಗಿವೆ. ನೈಜೀರಿಯಾ ಮೂಲದ ಈ ವ್ಯಕ್ತಿ ತನ್ನ ಹೆಸರನ್ನು ಮಾರ್ಟಿನ್, ಮ್ಯಾಥ, ಟೀನ್ ಎಂದು ಸುಳ್ಳು ಹೇಳಿದ್ದಾನೆ.

ಬೇರೆ ಕಡೆ ಈತನನ್ನು ಹಿಡಿದುಕೊಂಡು ಬಂದಿರುವ ಎನ್‌ಸಿಬಿ

ಅಧಿಕಾರಿಗಳು ಧಾರವಾಡ ಮಾಳಮಡ್ಡಿಯ ಬಡಾವಣೆಯಲ್ಲಿ

ಆತ ವಾಸವಿದ್ದ ಮನೆಗೆ ಕರೆದುಕೊಂಡು ಬಂದು ಪರಿಶೀಲನೆ

ನಡೆಸಿದರು. ಸುಮಾರು ವರ್ಷಗಳಿಂದ ಈತ ಧಾರವಾಡದಲ್ಲಿ

ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ಈ ದಂಧೆ ನಡೆಸಿದ್ದಾನೆ.

ದೇಶದ ವಿವಿಧ ಕಡೆಗಳಲ್ಲಿ ಕೊಕೆನ ಮಾರಾಟ ಮಾಡುವ

ಜಾಲವನ್ನು ಈತ ಹೊಂದಿದ್ದ. ಹೀಗಾಗಿಯೇ ಧಾರವಾಡ

ರೈಲು ನಿಲ್ದಾಣದ ಬಳಿಯೇ ಬಾಡಿಗೆ ಮನೆ ಪಡೆದಿದ್ದ.

ಈತನ ಮನೆಯಲ್ಲಿ ಅಪಾರ ಪ್ರಮಾಣದ ಹೆಣ್ಣು ಮಕ್ಕಳು ಬಳಸುವ ವ್ಯಾನಿಟಿ ಬ್ಯಾಗ್ ಹಾಗೂ ಚಿಕ್ಕ ಪರ್ಸ್‌ಗಳು ಪತ್ತೆಯಾಗಿವೆ. ಈತ ಉನ್ನತ ವ್ಯಾಸಾಂಗ ಮಾಡಲು ಬಂದಿರುವುದಾಗಿ ಹೇಳಿ ಬಾಡಿಗೆ ಮನೆ ಪಡೆದಿದ್ದ. ಸದ್ಯ ಈಗ ಎನ್‌ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಈ ನೈಜೀರಿಯಾ ಪ್ರಜೆಯ ಅಸಲಿ ಮುಖ ಬಯಲಾಗಿದೆ. ಕೇಂದ್ರ ಗೃಹ ಇಲಾಖೆ ಅಧೀನದಲ್ಲಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋದ ಬೆಂಗಳೂರು ಕಚೇರಿಯ ಒಟ್ಟು 8 ಅಧಿಕಾರಿಗಳು ನೈಜೀರಿಯಾ ಪ್ರಜೆಯನ್ನು ಧಾರವಾಡಕ್ಕೆ ಕರೆ ತಂದು ಪರಿಶೀಲನೆ ನಡೆಸಿದರು.

Share News

About Shaikh BigTv

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *