ಹುಬ್ಬಳ್ಳಿ: ಹಳೇ ಕೋರ್ಟ್ ಸರ್ಕಲ್ ಬಳಿ ಪ್ರೈಓವರ್ ಕಾಮಗಾರಿ ವೇಳೆಯಲ್ಲಿ ನಡೆದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ASI ನಾಭಿರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಾವಿನಲ್ಲೂ ಅವರ ಕುಟುಂಬಸ್ಥರು ಸಾರ್ಥಕತೆಯನ್ನು ಮೆರೆದಿದ್ದು ನಾಭಿರಾಜ್ ಅವರ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದಾರೆ.
ASI ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯವನ್ನು ತುಂಬಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಆಗಿದ್ದ FIR ತಿದ್ದುಪಡಿ ಮಾಡಿ 19 ಜನರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. A1 ಆರೋಪಿಯನ್ನಾಗಿ ಕಾಂಟ್ರ್ಯಾಕ್ಟರ್ ತೆಗೆದುಕೊಂಡ ಗುತ್ತಿಗೆದಾರರನ್ನು ಮಾಡಲಾಗಿದೆ ಅಂತ ಕಮಿಷನರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ASI ನಾಭಿರಾಜ್ ಅವರಿಗೆ ಕಣ್ಣುಗಳನ್ನು ದಾನ ಮಾಡಬೇಕು ಎಂಬ ಇಂಗಿತ ಇತ್ತು. ಹೀಗಾಗಿ ಕೇವಲ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಬೇರೆ ಅಂಗಾಂಗಗಳ ವೈಫಲ್ಯ ಆದ ಕಾರಣ ಬೇರೆ ಅಂಗಾಂಗಗಳನ್ನು ದಾನ ಮಾಡಲು ಆಗಿಲ್ಲ. ಮೃತರ ಅಂತ್ಯಕ್ರಿಯೆಯನ್ನು ಸತ್ತೂರಿನಲ್ಲಿ ಮಧ್ಯಾಹ್ನ ಎರಡು ಗಂಟೆಗೆ ನೆರವೇರಿಸಲಾಗುವುದು ಎಂದು ನಾಭಿರಾಜ್ ಸಂಬಂಧಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

