ಅಣ್ಣಿಗೇರಿ: ಗಣೇಶ ಚತುರ್ಥಿಯ ನಿಮಿತ್ಯ ಅಣ್ಣಿಗೇರಿಯ ಶ್ರೀ ಮಹಾನ್ ಮಹಾತ್ಮಾ ಗಾಂಧಿಜಿ ಯುವಕ ಮಂಡಳದ ವತಿಯಿಂದ ಇಂದು ದಾಸೋಹಮಠದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ಶಾಸಕ ಕೋನರಡ್ಡಿ ಅವರು ನೆರವೇರಿಸಿ,ರಕ್ತ ದಾನ ಮಾಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮಾಯಣ್ಣವರ, ಮಾಜಿ ಪುರಸಭಾ ಅಧ್ಯಕ್ಷರಾದ ಮುತ್ತು ದ್ಯಾವನೂರ, ಹಿರಿಯರಾದ ಬಸವರಾಜ ಕುಬಸದ, ನಾಗಪ್ಪ ಗಾಣಗೇರ, ಅರುಣಕುಮಾರ ಮಜ್ಜಗಿ, ಸಾಗರ ಕಾಳಪ್ಪನವರ ಹಾಗೂ ಯುವಕ ಮಂಡಳದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ನಗರದ ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

