Breaking News

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ಪತಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮದಲ್ಲಿ ವರದಕ್ಷಿಣೆ ಹಾಗೂ ಕೌಟುಂಬಿಕ ಕಿರುಕುಳದಿಂದ ಗೃಹಿಣಿ ಅಕ್ಷತಾ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅಕ್ಷತಾ, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎಂಟು ವರ್ಷಗಳ ಹಿಂದೆ ಪುರುಷೋತ್ತಮ ಅವರನ್ನು ವಿವಾಹವಾಗಿದ್ದ ಅಕ್ಷತಾ ಅವರಿಗೆ ಅತ್ತೆ, ಪತಿಯ ಎದುರೇ ಪೊರಕೆಯಿಂದ ಹಲ್ಲೆ ನಡೆಸಿ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಆಗ್ರಹಿಸಿದ್ದು, ಪತಿ ಪುರುಷೋತ್ತಮ ಸೇರಿದಂತೆ ನಾಲ್ವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲೂ ಬೈಕ್ ಸವಾರನ ಕುತ್ತಿಗೆ ಸೀಳಿದ ಮಾರಕ ಮಾಂಜಾ ದಾರ

ಬೆಂಗಳೂರು: ನಿಷೇಧಿತ ಚೈನೀಸ್ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರರೊಬ್ಬರ ಕುತ್ತಿಗೆ ಭೀಕರವಾಗಿ ಸೀಳಿರುವ ಘಟನೆ ಹೆಗಡೆನಗರದ ಫ್ಲೈ ಓವರ್ …

Leave a Reply

Your email address will not be published. Required fields are marked *