ಹುಬ್ಬಳ್ಳಿ: ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದ ವಾಹನಗಳ ಹರಾಜಿಗೆ ಜನರು ಮುಗಿಬಿದ್ದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಹೊರಠಾಣೆ ಬಂಡಿವಾಡದಲ್ಲಿ ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿದ್ದ, 12 ದ್ವಿಚಕ್ರ ವಾಹನಗಳ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಂಡಿದ್ದು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.
ಬೆಳಗ್ಗೆಯಿಂದಲೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನೂರಾರು ಜನ ಹಾಜರಿದ್ದರು. ಬಳಿಕ ಪಿಎಸ್‌ಐ ಸಚಿನ್ ಅಲಮೇಲ್ಕರ್ ವಾಹನ ಹರಾಜು ಪ್ರಕ್ರಿಯೆ ನಡೆಸಿದರು. ಮುಂಗಡ 5,000 ಸಾವಿರ ರೂ. ಪಾವತಿಸಿ ರಸೀದಿ ಪಡೆದವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ ಜನರು ಉತ್ತಮ ಮಟ್ಟದಲ್ಲಿ ಬಿಡ್ ಕೂಗಲು ಆರಂಭಿಸಿದರು.
ವಾಹನಗಳು ಹೆಚ್ಚಿನ ಬೆಲೆಗೆ ಹರಾಜಾದವು. ಇನ್ನು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ 12 ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಹರಾಜು ಮಾಡಲಾಗುತ್ತಿದೆ. ಈ ವಾಹನಗಳನ್ನು ಸಾರ್ವಜನಿಕ ಬಹಿರಂಗ ಹರಾಜು ಮಾಡಲು ನ್ಯಾಯಾಲಯದಿಂದ ಅನುಮತಿ ಪಡೆದು, ಬಂಡಿವಾಡದಲ್ಲಿನ ಗ್ರಾಮೀಣ ಠಾಣೆ ಆವರಣದಲ್ಲಿ ಹರಾಜು ಹಾಕಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

