ಬೆಂಗಳೂರು: ರಾಷ್ಟ್ರೀಯ ಯುವ ದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ವಿಡಿಯೋ ಸಂದೇಶವನ್ನು ತಿಳಿಸಿದ್ದಾರೆ.ಸ್ವಾಮಿ ವಿವೇಕಾನಂದರು ಯುವಜನತೆಗೆ ಸ್ಫೂರ್ತಿ, ಉತ್ಸಾಹ, ದೇಶಾಭಿಮಾನವನ್ನು ಧರ್ಮದ ಮೂಲಕ ತುಂಬಿದವರು, ಭ್ರಾತೃತ್ವವನ್ನು ಸಾರಿದವರು. ಅವರ ಬೋಧನೆಗಳನ್ನು ಅನುಸರಿಸಿ ನವಭಾರತ ನಿರ್ಮಾಣಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವಕರ ದಿನ ಅಂತ ಘೋಷಿಸಿದರು. ಇಂದು ಇಡೀ ದೇಶ ಯುವ ದಿನವನ್ನು ಆಚರಿಸುತ್ತಿದೆ. ಸ್ವಾಮಿ ವಿವೇಕಾನಂದ ಪ್ರಭಾವಶಾಲಿ ಸ್ವಾಮೀಜಿಯಾಗಿದ್ದರು. ಹಿಂಧೂ ಧರ್ಮದಲ್ಲಿ ಹೊಸ ಚೈತನ್ಯ ಮೂಡಿಸುವ ಕಾರ್ಯ ಮಾಡಿದ್ದರು. ಇವರ ಮುಖದ ತೇಜಸ್ಸು ಇಡೀ ವಿಶ್ವಕ್ಕೆ ಮಾದರಿಯಾಗಿತ್ತು. ಅವರ ವರ್ಚಸ್ಸು, ತೇಜಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿತ್ತು ಎಂದು ನುಡಿದಿದ್ದಾರೆ.ಇಂದು ಅವರ ಜನ್ಮದಿನ ಆಚರಿಸುತ್ತಿರುವ ಸಂದರ್ಭದಲ್ಲಿ ನಾವು ಅವರು ಬೋಧಿಸಿದ ಸಿದ್ಧಾಂತ ಪಾಲಿಸಬೇಕು. ಧರ್ಮ ಎಲ್ಲರ ರಕ್ಷಣೆ ಮಾಡಬೇಕು. ಧರ್ಮದ ಮೂಲಕ ಬ್ರಾತೃತ್ವ, ಸಹೋದರ ಭಾವನೆ ಬೆಳೆಯಬೇಕು. ಬದುಕಿನ ಉನ್ನತ ಮಟ್ಟಕ್ಕೆ ಧರ್ಮ ಬಳಕೆಯಾಗಬೇಕೇ ಹೊರತು ಕ್ಷುಲ್ಲಕ ಹಾಗೂ ವ್ಯತ್ಯಾಸ ಸೃಷ್ಟಿಸುವ ಕಾರ್ಯಕ್ಕೆ ಧರ್ಮ ಕಾರಣವಾಗಬಾರದು. ಇವರ ಕೃತಿಗಳನ್ನು, ಬೋಧನೆಯನ್ನು ಓದಿಕೊಂಡು ನವ ಭಾರತ ನಿರ್ಮಾಣಕ್ಕೆ ಮುಂದಾಗೋಣ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





