Breaking News

4 ನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿದ ಪ್ರಧಾನಿ ಮೋದಿ

ಗಾಂಧಿನಗರ್: ಇಪ್ಪತ್ತೊಂದನೇ ಶತಮಾನದಲ್ಲಿ ಭಾರತವೇ ಪ್ರಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಹೇಳಿದ್ದಾರೆ. ನಾಲ್ಕನೇ ಜಾಗತಿಕ ಮರುಬಳಕೆ ಇಂಧನ ಹೂಡಿಕೆದಾರರ ಸಭೆಯನ್ನು (ರೀ ಇನ್ವೆಸ್ಟ್) ಉದ್ಘಾಟಿಸಿದ ಬಳಿಕ ಭಾಷಣ ಮಾಡಿದ ಮೋದಿ, ಭಾರತ ಅಗ್ರಸ್ಥಾನಕ್ಕೆ ಏರುವುದಷ್ಟೇ ಅಲ್ಲ, ಆ ಸ್ಥಾನ ಉಳಿಸಿಕೊಳ್ಳುವುದು ಹೇಗೆ ಎನ್ನುವ ಅಂಶಗಳತ್ತ ಗಮನಿಸಲಾಗುತ್ತಿದೆ ಎಂದಿದ್ದಾರೆ. ಮುಂದಿನ ಸಹಸ್ರ ವರ್ಷಗಳಿಗೆ ಭಾರತದಲ್ಲಿ ಈಗ ತಳಹದಿ ನಿರ್ಮಿಸಲಾಗುತ್ತಿದೆ ಎಂದೂ ಪ್ರಧಾನಿ ವಿವರಿಸಿದ್ದಾರೆ.
ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವನ್ನಾಗಿ ಮಾಡಲು 140 ಕೋಟಿ ಜನರು ಪಣತೊಟ್ಟಿದ್ದಾರೆ. ನಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ನಾವು ಈ ದೇಶದ ಕ್ಷಿಪ್ರ ಬೆಳವಣಿಗೆಗೆ ಪ್ರತಿಯೊಂದು ವಲಯ ಮತ್ತು ಅಂಶಗಳಲ್ಲೂ ಪ್ರಯತ್ನ ಮಾಡಿದ್ದೇವೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ನಾಲ್ಕನೇ ಜಾಗತಿಕ ಇಂಧನ ಸಮಾವೇಶ ಗಾಂಧಿನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. 140ಕ್ಕೂ ಹೆಚ್ಚು ದೇಶಗಳಿಂದ 10,000ಕ್ಕೂ ಹೆಚ್ಚು ನಿಯೋಗಗಳು, ತಜ್ಞರು, ಉದ್ಯಮಿಗಳು ಮೊದಲಾದವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೆಹಲಿಯಿಂದ ಆಚೆ ಮೊದಲ ಬಾರಿಗೆ ನಡೆಯುತ್ತಿರುವ ಸಮಾವೇಶದಲ್ಲಿ ಈ ಬಾರಿ ಮಿಷನ್ 500 ಗಿಗಾ ವ್ಯಾಟ್ ಎಂಬುದು ಸೆಂಟ್ರಲ್ ಥೀಮ್ ಆಗಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *