ಕಲಬುರಗಿ: ಮೇಳಕುಂದಾ(ಕೆ) ಗ್ರಾಮದ ಸಮೀಪದ ಹೊಲದ ಬಾವಿಯಲ್ಲಿ 30 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತೆಯನ್ನು ಲಕ್ಷ್ಮಿ ಅಂಬ್ರಿಶ್ ಕುಂಬಾರ ಎಂದು ಗುರುತಿಸಲಾಗಿದೆ. ಲಕ್ಷ್ಮಿಗೆ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ, ಪತಿ ಅಂಬ್ರಿಶ್ ಕುಂಬಾರ, ಮಾವ ನರಸಿಂಗ, ಅತ್ತೆ ದೇವತಾ ಮತ್ತು ಮೈದುನ ಲೋಕೇಶ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಕುಟುಂಬಸ್ಥರು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

