Breaking News

ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ : ಬಸವಜಯ ಮೃತ್ಯುಂಜಯ

ಹುಬ್ಬಳ್ಳಿ : ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಬೃಹತ್ ಸಭೆ ಮಾಡಳಿದ್ದೇವೆ .2ಎ ಮೀಸಲಾತಿ ಚಳುವಳಿ ಹರಿಯುವ ಗಂಗೋತ್ರಿ ಇದ್ದಂತೆ ಆದೇಶ ಸಿಗುವವರೆಗೂ ನಿರಂತರ ಹೋರಾಟ ಮಾಡ್ತೇವೆ .2ಎ ಮೀಸಲಾತಿಗಾಗಿ ಮತ್ತೊಂದು ಹೋರಾಟಕ್ಕೆ ಸಜ್ಜು ಆಗಲಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ರಾಜ್ಯ ಮಟ್ಟದ ವಕೀಲ ಸಮಾಜ ಸಂಘಟನೆ ಮಾಡ್ತಾ ಇದ್ದೇವೆ .7ನೇ ಹಂತದ ಹೋರಾಟ ಈಗಾಗಲೇ ಆರಂಭ ಮಾಡಿದ್ದೇವೆ. ಸರ್ಕಾರ ರಚನೆಯಾದ ಮೇಲೆ 20 ಜನ ಶಾಸಕರು ಮಾತನಾಡಲಿಲ್ಲ .ಮನೆ ಮನೆಗೆ ಹೋಗಿ ಆಗ್ರಹ ಪತ್ರ ಚಳುವಳಿ ಮಾಡಿದ್ದೇವೆ .9ದಿನಗಳ ಅಧಿವೇಶನದಲ್ಲಿ ಶಾಸಕರುಗಳು ಸ್ಪೀಕರ್ ಗೆ ಮನವಿ ಕೊಟ್ರು .ಮುಡಾ, ವಾಲ್ಮೀಕಿ ಹಗರಣಗಳ ನಡುವೆ ಶಾಸಕರ ಧ್ವನಿ ಅಡಗಿಸುವ ಕೆಲಸ ಆಗಿದೆ. ನಮ್ಮ ಸಮಾಜದಲ್ಲಿ ಹೆಚ್ಚಿನ ವಕೀಲರಾಗಿದ್ದಾರೆ .ವಕೀಲರ ಮೂಲಕ ಹೋರಾಟ ಮಾಡುವ ಉದ್ದೇಶ ಇದೆ .ಇಂದು ನಮ್ಮ ಸಮಾಜದ ವಕೀಲರ ಜೊತೆ ಸಭೆ ಮಾಡ್ತಾ ಇದ್ದೇವೆ ಎಂದರು.

ರಾಜ್ಯ ಮಟ್ಟದ ವಕೀಲರ ಲಿಂಗಾಯತ ಪಂಚಮಸಾಲಿ ಸಂಘಟನೆ ಮಾಡೋ ವಿಚಾರ ಮಾಡ್ತೆದ್ದೇವೆ .ಸೆಪ್ಟೆಂಬರ್ 22 ಬೆಳಿಗ್ಗೆ ಬೆಳಗಾವಿಯಲ್ಲಿ ದೊಡ್ಡ ಸಮಾವೇಶ ಮಾಡ್ತಾ ಇದ್ದೇವೆ .ಬೆಳಗಾವಿ, ಕೊಪ್ಪಳ, ಬೀದರ, ಯಾದಗಿರಿ ಸೇರಿ ಹಲವು ಜಿಲ್ಲೆಗಳಲ್ಲಿ ವಕೀಲರನ್ನ ಸೇರಿಸಿ ಸಿಎಂ ಗೆ ಮನವಿ ಕೊಡ್ತೇವೆ .ನಮ್ಮ 2ಎ ಮೀಸಲಾತಿ ಸರ್ಕಾರ ನಿರ್ಲಕ್ಷ ಮಾಡ್ತಿದ್ದೆ .11 ಜನ ಹಿರಿಯ ವಕೀಲರ ತಂಡ ಮಾಡ್ತಿದ್ದೇವೆ
ಮುಖ್ಯಮಂತ್ರಿಗಳಿಗೆ ಮನವಿ ಕೊಡಲಿದ್ದೇವೆ .ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ವಕೀಲರನ್ನ ಸೇರಿಸುತ್ತಿದ್ದೇವೆ .17ಕ್ಕೆ ಹೈದ್ರಾಬಾದ್ ಕರ್ನಾಟಕಕಕ್ಕೆ ಬರ್ತಿದ್ದಾರೆ, ಆಗ್ರಹ ಮನವಿ ಕೊಡ್ತೇವೆ ಎಂದರು.

ಶಾಸಕಾಂಗ ಮೌನಕ್ಕೆ ಶರಣಾಗಿದೆ, ಹೀಗಾಗಿ ನ್ಯಾಯಾಗ ಮೂಲಕ ಹೋರಾಟ ಮಾಡ್ತೇವೆ .ವಕೀಲರಾದ ಸಿದ್ದರಾಮಯ್ಯ ಅವರಿಗೆ ನಮ್ಮ ವಕೀಲರ ಮೂಲಕ ಆಗ್ರಹ ಮಾಡ್ತೇವೆ .ಮೊದಲ ಬಾರಿಗೆ ಈ ಚಳುವಳಿ ಮಾಡ್ತಿದ್ದೇವೆ
ಸಮಾವೇಶ ನಂತರ ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಧರಣಿ ಮಾಡ್ತೇವೆ .ಸುಮಾರು 2000 ವಕೀಲರು ಸೇರ್ಪಡೆ ಆಗಲಿದ್ದಾರೆ .ಮುಖ್ಯಮಂತ್ರಿಗಳು ನಮ್ಮನ್ನ ಸಭೆಗೆ ಕರಿಬೇಕು
ಇಲ್ಲದಿದ್ರೆ ಉಗ್ರ ಹೋರಾಟಕ್ಕೆ ದಿನಾಂಕ ನಿಗದಿ ಮಾಡ್ತೇವೆ
ಈ ಬಾರಿ 10,000 ಕ್ಕಿಂತ ಹೆಚ್ಚು ವಕೀಲರನ್ನ ಕೂಡಿಸ್ತೀವೆ ಎಂದರು.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *