Breaking News

ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ. ಅವನ ತಾಕತ್ತು ನಾನು ನೋಡಿದ್ದೇನೆ. ಅವನು ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಿಲ್ಲ. ನನ್ನನ್ನು ಜನರು ಆರಿಸಿ ತಂದಿದ್ದಾರೆ ಅವನಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮಂಟೂರ ರೋಡ್‌ನ ರುಧ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಿರುವ ವಿಚಾರವಾಗಿ ಮಾತನಾಡಿದ್ದ ಪ್ರಮೋದ್‌ ಮುತಾಲಿಕ್, ಪ್ರಸಾದ್ ಅಬ್ಬಯ್ಯ ಅವರಿಗೆ ಕಬರಸ್ತಾನದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಲಿ ಎಂದಿದ್ದರು. ಇದಕ್ಕೆ ಮಾಧ್ಯಮಗೋಷ್ಠಿ ಪ್ರತಿಕ್ರಿಯೆ ನೀಡಿದ ಶಾಸಕ ಅಬ್ಬಯ್ಯ ಅವರು, ಪ್ರಮೋದ ಮುತಾಲಿಕ್‌ ಅಂತಾರಾಷ್ಟ್ರೀಯ ನಾಯಕನೇನು ಅಲ್ಲಾ. ಆತ ನನ್ನನ್ನ ಆರಿಸಿ ತಂದಿಲ್ಲ, ಜನ ತಂದಿದ್ದಾರೆ. ಅವರಿಗಾಗಿ ನಾನು ಕೆಲಸ ಮಾಡ್ತಾ ಇದ್ದೇನೆ ಎಂದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *