Breaking News

ಬೆಳಗಲಿ ಕ್ರಾಸ್ ಬಳಿ ಅಪಘಾತ : ಆರು ಜನರಿಗೆ ಗಾಯ

ಹುಬ್ಬಳ್ಳಿ : ತಾಲೂಕಿನ ಬೆಳಗಲಿ ಕ್ರಾಸ್ ಬಳಿ ಟ್ರ್ಯಾಕ್ಟರ್‌ ಹಾಗೂ ಟ್ಯಾಂಕ‌ರ್ ನಡುವೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿ ಎಂದಿನಂತೆ ಕೆಲಸಕ್ಕೆ ತೆರಳುವ ಸಮಯದಲ್ಲಿ ಹಿಬಂದಿಯಿಂದ ಬಂದ ಟ್ಯಾಂಕರ್, ಟ್ರ್ಯಾಕ್ಟರ್ ಗೆ ಗುದ್ದಿದ ರಭಸಕ್ಕೆ ಟ್ರ್ಯಾಕ್ಟ‌ರ್ ನ ಟ್ರೇಲರ್ ಬೇರ್ಪಟ್ಟಿದೆ,ಅಪಘಾತದಲ್ಲಿ ಆರು ಜನ ಮಹಿಳೆಯರು ಸೇರಿದಂತೆ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಟ್ರ್ಯಾಕ್ಟರ್‌ ನಲ್ಲಿ ಇದ್ದ ಶಾಂತವ್ವ, ಕಲಾವತಿ, ಸವಿತಾ ಹಂಚಿನಾಳ, ಲಕ್ಷ್ಮಿ, ಮಹಾದೇವಿ, ಸವಿತಾ ಪಾಟೀಲ್ ಹಾಗೂ ಟ್ರ್ಯಾಕ್ಟ‌ರ್ ಚಾಲಕ ಚಂದ್ರಗೌಡ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಎಸಗಿದ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *