ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾತರಕಿ ಗುಡ್ಲಾನೂರು ಗ್ರಾಮದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು,ಕರುವನ್ನು ತಿಂದು ಹೋಗಿರುವ ಘಟನೆ ಇಂದು ನಡೆದಿದೆ.ಚಿರತೆ ದಾಳಿಯಿಂದ ಕಂಗಾಲಾಗಿರುವ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಹರಸಾಹಸಪಡುತ್ತಿದ್ದಾರೆ.ಕೆಲ ದಿನಗಳ ಹಿಂದಿನಿಂದ ಊರ ಹೊರಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ರಾತ್ರಿಯಾಗುತ್ತಿದ್ದಂತೆಯೇ ಊರೊಳಗಡೆ ನುಗ್ಗಿ ಸಣ್ಣ ಕರುಗಳನ್ನು ತಿಂದು ಹೋಗುತ್ತಿರುವುದು ಮಾಮೂಲಿಯಾಗಿದೆ.ಇದರಿಂದ ಸಾವ೯ಜನಿಕರು ಆತಂಕದಿಂದ ಬದುಕುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





