ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆಯಲ್ಲಿ ಕವಾಲಿ ಹಾಡನ್ನು ಹಾಕುವ ಮೂಲಕ ಹಿಂದೂ ಯುವಕರು ಮುಸ್ಲಿಂ ಪ್ರವಾದಿ ಮುಹಮ್ಮದರ ಗೌರವ ನಮನ ಸಲ್ಲಿಸಿದ್ದರು.
ಅದೇ ರೀತಿಯಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಗಣೇಶ ಪೆಂಡಾಲ್ ಮುಂದೆ ಮುಸ್ಲಿಂ ಯುವಕರು ಗಣಪತಿ ಹಾಡನ್ನು ಹಾಕುವ ಮೂಲಕ ವಿಶ್ವೇಶ್ವರನಿಗೆ ಗೌರವ ಸಮರ್ಪಣೆ ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನಾವೆಲ್ಲರೂ ಒಂದೇ ಎಂಬುವ ಸಂದೇಶವನ್ನು ಸಾರಿದ್ದಾರೆ.
ಬಹುತೇಕ ಕಡೆಯಲ್ಲಿ ಕೋಮುವಾದ ಗಲಾಟೆ ನಡೆಯುತ್ತಿರುವ ಮಧ್ಯದಲ್ಲಿ ಹುಬ್ಬಳ್ಳಿಯ ಜನರು ಇಂತಹದೊಂದು ಸೌಹಾರ್ದತೆಗೆ ಸಾಕ್ಷಿಯಾಗಿರುವುದು ನಿಜಕ್ಕೂ ಭಾರತದ ಪರಂಪರೆಗೆ ಸೂಕ್ತ ನಿದರ್ಶನವಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

