Breaking News

ಜನರಿಗೆ ಕಾಟ ಕೊಡುತ್ತಿದ್ದ ಗೂಳಿ ಸೆರೆ

ಧಾರವಾಡ: ನರೇಂದ್ರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಗೂಳಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಕಳೆದ 20 ದಿನಗಳಿಂದ ಗ್ರಾಮದ ಜಾನುವಾರುಗಳು ಮತ್ತು ಜನರನ್ನು ಕಾಡುತ್ತಿದ್ದ ಈ ಗೂಳಿಯ ಆಟಾಟೋಪಕ್ಕೆ ತಡೆಯೇ ಇಲ್ಲದಂತಾಗಿತ್ತು.

ಗ್ರಾಮದ ಗುಡ್ಡದ ಬಸವಣ್ಣನ ಹರಕೆಯಾಗಿರುವ ಈ ಗೂಳಿ ಜನರಿಗೆ ಕಾಟ ನೀಡುತ್ತಿತ್ತು. ಈ ಗೂಳಿಯನ್ನು ಬಂಧಿಸಲು ಪಕ್ಕದ ಚೆನ್ನಮ್ಮನ ಕಿತ್ತೂರನಿಂದ ಪರಿಣಿತರು ಬಂದು ಗೂಳಿಯನ್ನು ಸೆರೆ ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *