Breaking News

ಮಹದಾಯಿ ಯೋಜನೆ ಬಗ್ಗೆ ಚರ್ಚೆ, ಕಳಪೆ ಕಾಮಗಾರಿಗಳ ಬಗ್ಗೆ ಸಿ.ಬಿ.ಐ.ತನಿಖೆ ಒತ್ತಾಯ

ಬೆಂಗಳೂರು ; ಇಂದು ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ನೀರಾವರಿ ನಿಗಮ ಬೆಂಗಳೂರು ಕಾಫಿ ಬೋರ್ಡ್ನಲ್ಲಿ ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತ ಸೇನಾ ಕರ್ನಾಟಕ ಪದಾಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಯಿತು. ಈ ಒಂದು ಚರ್ಚೆಯ ಸಂದರ್ಭಗಳಲ್ಲಿ ಮಹದಾಯಿ ಯೋಜನೆ ಬಗ್ಗೆ ಮತ್ತು ಕೇಂದ್ರ ಸರಕಾರದ ಪರವಾನಿಗೆಗಳ ಬಗ್ಗೆ ದೀರ್ಘಕಾಲ ಚರ್ಚೆ ಮಾಡಿ ಶೀಘ್ರವಾಗಿ ಸರಕಾರವು ಒಂದು ಸಭೆಯನ್ನು ಕರೆದು ಇದಕ್ಕೆ ಸಂಬಂಧಪಟ್ಟ ಯೋಜನೆಗೆ ಸರಕಾರದ ಮಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳಲು ಒತ್ತಾಯಿಸಲಾಯಿತು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನಡೆದ ಡಿ ವೈ ಉಪ್ಪಾರ್ ಮಾಡಿದ ಕಳಪೆ ಕಾಮಗಾರಿಗಳ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಲಾಯಿತು. ತನಿಖೆಯಲ್ಲಿ ವಿಳಂಬವಾದರೆ ಉಗ್ರ ಹೋರಾಟ ಮಾಡಲು ನಿರ್ಣಯಸಲಾಯಿತು. ಈ ಸಂದರ್ಭದಲ್ಲಿ ವಿರೇಶ ಸೊಬರದಮಠ ಹಾಗೂ ಬೆಂಗಳೂರು ಜಿಲ್ಲಾ ಅದ್ಯಕ್ಷರಾದ ಶೈಲೇಂದ್ರ ಪಾಟೀಲ , V A ಚಿಕ್ಕಮಠ, ಶರಣಪ್ಪಗೌಡ ಪಾಟೀಲ, ನಂದೀಶ ಮಠದ, ನಾಗಲಿಂಗ ಜಾಡರ , ಪರಶುರಾಮ ಜಂಬಗಿ, ಅರ್ಜುನ ಮಾನೆ, ವೆಂಕನಗೌಡ ಗಡ್ಡೆನ್ನವರ, ರಘು ಮೂಲಿಮನಿ, ವೀರನಗೌಡ ಪಾಟೀಲ, ಮಲ್ಲಣ್ಣ ಆಲೇಕರ್, ಬಸವರಾಜ ಗುಡಿ ಹೇಮಕ್ಕ ಗಾಳಿ ಮತ್ತಿತರರು ಉಪಸ್ಥಿತರಿದ್ದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *