Breaking News

ವರ್ಲ್ಡ್ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ವಿಶ್ವದ ಅತಿದೊಡ್ಡ ಸ್ಟಾಕ್ ಮಾರ್ಕೆಟ್ ಬೆಂಚ್​ಮಾರ್ಕ್​ಗಳಲ್ಲಿ ಒಂದೆನಿಸಿದ ಎಂಎಸ್​ಸಿಐನ ಆಲ್ ಕಂಟ್ರಿ ವರ್ಲ್ಡ್ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ ಭಾರತದ ಷೇರು ಮಾರುಕಟ್ಟೆ ಚೀನಾವನ್ನು ಹಿಂದಿಕ್ಕಿದೆ. ಈ ಇಂಡೆಕ್ಸ್ ಪೈಪೋಟಿಯಲ್ಲಿ ಚೀನಾವನ್ನು ಭಾರತ ಮೀರಿಸಿದ್ದು ಇದೇ ಮೊದಲು. ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್​ನ್ಯಾಷನಲ್​ನ ಈ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ (ಎಂಎಸ್​ಸಿಐ ಎಸಿಡಬ್ಲ್ಯುಐ ಐಎಂಐ) ಭಾರತೀಯ ಷೇರುಗಳ ವೈಟೇಜ್ ಅಥವಾ ತೂಕ ಶೇ. 2.35ಕ್ಕೆ ಏರಿದೆ. ಇದೇ ವೇಳೆ ಬುಧವಾರ ದಿನಾಂತ್ಯದಲ್ಲಿ ಚೀನೀ ಸ್ಟಾಕ್​ಗಳ ವೈಟೇಜ್ ಶೇ. 2.24ಕ್ಕೆ ಇಳಿದಿದೆ. ಈ ಮೂಲಕ ಚೀನಾವನ್ನು ಭಾರತ ಹಿಂದಿಕ್ಕಿದೆ.
ಇಂಡೆಕ್ಸ್​ನ ಈ ವೈಟೇಜ್​ನಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಇದರಲ್ಲಿ ಅಮೆರಿಕದ ಪ್ರಾಬಲ್ಯ ಮುಂದುವರಿದಿದೆ. ಯುಎಸ್​ಎನ ವೈಟೇಜ್ ಶೇ. 63ರಷ್ಟಿದೆ. ಜಪಾನ್ ಶೇ. 5.73, ಯುಕೆ ಶೇ. 3.51, ಕೆನಡಾ ಶೇ. 2.83 ಮತ್ತು ಫ್ರಾನ್ಸ್ ಶೇ. 2.38 ವೈಟೇಜ್ ಹೊಂದಿದೆ. ಫ್ರಾನ್ಸ್​ಗಿಂತ ಭಾರತದ ವೈಟೇಜ್ 3 ಮೂಲಾಂಕಗಳಷ್ಟು ಮಾತ್ರ ಕಡಿಮೆ ಆಗಿದೆ. ಅತಿ ಶೀಘ್ರದಲ್ಲಿ ಭಾರತ ಈ ಇಂಡೆಕ್ಸ್ ವೈಟೇಜ್​ನಲ್ಲಿ ಐದನೇ ಸ್ಥಾನಕ್ಕೆ ಹೋಗುವ ಸಂಭಾವ್ಯತೆ ಇದೆ.
ಎಂಎಸ್​ಸಿಐನ ಇಂಡಿಯಾ ಇಂಡೆಕ್ಸ್ ಈ ವರ್ಷ ಶೇ. 23ರಷ್ಟು ಬೆಳೆದಿದೆ. ಇದೇ ವೇಳೆ, ಎಂಎಸ್​ಸಿಐ ಚೀನಾ ಇಂಡೆಕ್ಸ್ ಪ್ರಗತಿ ಕಂಡಿದ್ದು ಶೇ. 0.3ರಷ್ಟು ಮಾತ್ರ. ಇನ್ನು, ಈ ವರ್ಷ ಎಂಎಸ್​ಸಿಐನ ಉದಯೋನ್ಮುಖ ಮಾರುಕಟ್ಟೆ ಅಥವಾ ಇಎಂ ಇಂಡೆಕ್ಸ್ ಶೇ. 6.52ರಷ್ಟು ಹೆಚ್ಚಳವಾಗಿದೆ. ಇವಕ್ಕೆ ಹೋಲಿಸಿದರೆ ಇಂಡಿಯಾ ಇಂಡೆಕ್ಸ್ ಬೆಳವಣಿಗೆ ಅಗಾಧವಾಗಿದೆ.
ಆದರೆ, ಎಂಎಸ್​ಸಿಐ ಇಂಡಿಯಾ ಇಂಡೆಕ್ಸ್ ಭರ್ಜರಿ ಹೆಚ್ಚಳ ಕಂಡರೂ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್​ನಲ್ಲಿ ಸ್ಟಾಕುಗಳ ವೈಟೇಜ್​ನಲ್ಲಿ ಚೀನಾಗಿಂತ ಭಾರತ ತುಸು ಹಿಂದಿದೆ. ಚೀನಾ ಶೇ. 23.74ರಷ್ಟು ವೈಟೇಜ್ ಹೊಂದಿದ್ದರೆ, ಭಾರತದ್ದು ಶೇ. 20.7ರಷ್ಟಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *