ಬೆಂಗಳೂರು: ಕ್ರೈಂ ಡಿಟೆಕ್ಷನ್ನಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ದಾಖಲೆ ಬರೆದಿದ್ದಾರೆ. ದಾಖಲಾದ ಅಷ್ಟೂ ರೇಪ್ ಕೇಸ್ಗಳನ್ನ ಸಾಲ್ವ್ ಮಾಡಿದ್ದಾರೆ. ಆ ಮೂಲಕ ಈ ಹಿಂದಿನ ಹಿಂದಿನ ಕಮೀಷನರ್ಗಳನ್ನ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೇ ನವೆಂಬರ್ ಅಂತ್ಯದ ವರೆಗೂ ದಾಖಲಾದ ಬಹುತೇಕ ಎಲ್ಲಾ ಕೇಸ್ಗಳನ್ನ ಕ್ಲಿಯರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಾಖಲಾದ 202 ಮರ್ಡರ್ ಕೇಸ್ಗಳಲ್ಲಿ 194 ಕೇಸ್ಗಳನ್ನ ಕ್ಲೀಯರ್ ಮಾಡಿದ್ದಾರೆ. ಇನ್ನು 636 ರಾಬರಿ ಪ್ರಕರಣದಲ್ಲಿ 411 ಪ್ರಕರಣ ಕ್ಲಿಯರ್ ಆಗಿವೆ. 249 ಸರಗಳ್ಳತನ ಪ್ರಕರಣ ವರದಿಯಾಗಿದ್ದು, ಅದ್ರಲ್ಲಿ 206 ಕೇಸ್ ಪತ್ತೆ ಮಾಡಲಾಗಿದೆ. ಇನ್ನು ವರ್ಷದಲ್ಲಿ 5023 ಮೋಟಾರ್ ವಾಹನ ಕಳುವಾಗಿದ್ದು, 1296 ವೈಕಲ್ಗಳನ್ನ ಪತ್ತೆ ಮಾಡಿದ್ದಾರೆ. ಅಲ್ಲದೇ 2701 ಚೀಟಿಂಗ್ ಕೇಸ್ ದಾಖಲಾಗಿದ್ದು, 1015 ಕೇಸ್ಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗಿದೆ. ಇನ್ನೂ ಪೋಕ್ಸೋ ಕಾಯ್ದೆಯಡಿಯಲ್ಲಿ 337 ಮಂದಿಯನ್ನ ಜೈಲಿಗಟ್ಟಿದ್ದಾರೆ. ಒಟ್ಟಾರೆ ಅಂಕಿ ಅಂಶ ನೋಡುವುದಾದರೆ ಈ ಹಿಂದಿನ ಯಾವ ಕಮೀಷನರ್ ಅವಧಿಯಲ್ಲೂ ಆಗದಷ್ಟು ಹೆಚ್ಚಿನ ಕ್ರೈಂ ಡಿಟೆಕ್ಷನ್ ಟಿ. ಸುನೀಲ್ ಕುಮಾರ್ ಅವಧಿಯಲ್ಲಿ ಆಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





