Breaking News

ಲಕ್ಷ ಮೌಲ್ಯದ ಪರ್ಸ್ ಹಿಂದಿರಿಗಿಸಿದ ಮಾನವೀಯತೆ ಮರೆದ ಯುವಕ

ಹುಬ್ಬಳ್ಳಿ: ಮೊನ್ನೆ ಗಣೇಶ ವಿಸರ್ಜನೆ ಸಂದರ್ಭದಲ್ಲಿ ತಡರಾತ್ರಿ ರಸ್ತೆ ಬದಿಯಲ್ಲಿ ಕೊಟಗೊಂಡಹುಣಸಿ ಗ್ರಾಮದ ರವಿ ಎಂಬುವರು ತಮ್ಮ ಪರ್ಸ್‌ ಕಳೆದುಕೊಂಡಿದ್ದರು.ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 15-20 ಗ್ರಾಂ ಚಿನ್ನದ ಸರ ಜೊತೆಗೆ ಪ್ರಮುಖ ದಾಖಲೆಗಳನ್ನು ಹೊಂದಿರುವ ಪರ್ಸ್‌ ಕಳೆದುಕೊಂಡ ಬೇಜಾರಿನಲ್ಲಿ ಇದ್ದರು. ಈ ವೇಳೆ ನೂಲ್ವಿ ಗ್ರಾಮದ ಶಂಭಾಜಿರಾವ್ ಲಕ್ಷ್ಮಣ ರಾವ್ ಗೋರ್ಪಡೆ ಅವರು ಕರೆಮಾಡಿ ನಿಮ್ಮ ಪರ್ಸ್ ಸಿಕ್ಕಿದೆ ಬಂದು ತೆಗೆದುಕೊಂಡು ಹೋಗಿ ಎಂದು ನೂಲ್ವಿಯ ಎಲ್ಲ ಹಿರಿಯರ ಮುಂದೆ ತಮಗೆ ಸಿಕ್ಕಿದ್ದ ಪರ್ಸ್ ಹಿಂದಿರುಗಿಸಿ ಸಾರ್ಥಕತೆ ಮೆರೆದಿದ್ದಾರೆ.

ಇಂತಹ ಕಾಲದಲ್ಲಿಯೂ ಸತ್ಯ ಹರಿಶ್ಚಂದ್ರ ರೀತಿಯಲ್ಲಿ ಸತ್ಯದ ಹಾದಿಯಲ್ಲಿ ನಡೆಯುತ್ತಿರುವ ನೂಲ್ವಿ ಗ್ರಾಮದ ಶಂಭಾಜಿರಾವ್ ಲಕ್ಷಣರಾವ್ ಗೋರ್ಪಡೆಯವರಿಗೆ ಹ್ಯಾಂಡ್ಸ್ ಆಪ್.

ಇನ್ನು ಈ ಸಂದರ್ಭದಲ್ಲಿ ನೂಲ್ವಿ ಗ್ರಾಮದ ಹಿರಿಯರಾದ ಅಣ್ಣಾರಾವ್ ಗೋರ್ಪಡೆ, ಮಾಧವರಾವ್ ಕದಂಬ, ನೇಮನಗೌಡ್ರ ಪಾಟೀಲ್, ಶಂಕರಗೌಡ್ರ ಮುನಣ್ಣವರ, ಗದಿಗೆಪ್ಪ ಜಿಡ್ಡಿ, ವೀರನಗೌಡ್ರ ಸಂಕನಗೌಡ್ರ, ಶಿವಾನಂದ ಸ್ವಾಮೀಜಿ ನಿಂಗನಗೌಡ್ರ ಹೊಸಮನಿ ಸೇರಿದಂತೆ ಮುಂತಾದ ಹಿರಿಯರು ಉಪಸ್ಥಿತರಿದ್ದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *