Breaking News

ಕೃಷಿ ನೀರಾವರಿ ಪಂಪ್‍ಸೆಟ್ ಆಧಾರ್ ಜೋಡಣೆಗೆ ಸೆ.23 ಕೊನೆಯ ದಿನ

ಬೆಂಗಳೂರು : ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‍ಸೆಟ್‍ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆಗೆ ಸೆ.23 ರ ನಾಳೆಯೇ ಕೊನೆಯ ದಿನವಾಗಿದೆ.
ಆದ್ದರಿಂದ ಹೆಸ್ಕಾಂಗಳು 10 ಹೆಚ್‌ಪಿ ಪಂಪ್‌ ಸೆಟ್‌ ಹೊಂದಿರುವ ರೈತರ ಆಧಾರ್‌ ಸಂಖ್ಯೆ ಸಂಗ್ರಹ ಮಾಡುತ್ತಿದೆ.
ಹಾಲಿ ಇರುವ ಕೃಷಿ ಪಂಪ್‍ಸೆಟ್‍ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್ ಮ್ಯಾನ್ ಅಥವಾ ಮೀಟರ್ ರೀಡರ್‍ಗಳಿಗೆ ಸಲ್ಲಿಸಿ ಹಾಲಿ ಆರ್.ಆರ್.ಸಂಖ್ಯೆಯಲ್ಲಿರುವ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Share News

About BigTv News

Check Also

3 ವರ್ಷದಿಂದ ಪ್ರೀತಿಸುವಂತೆ ಕಿರುಕುಳ: ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯನ್ನು ತಬ್ಬಿಕೊಂಡ ಯುವಕ!

ಮೈಸೂರು: ಪ್ರೇಮ ನಿರಾಕರಿಸಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಯುವಕನೊಬ್ಬ, ಮೈಸೂರಿನ ವಿಜಯನಗರದ ಡಿಪ್ಲೊಮಾ ಕಾಲೇಜು ಹಾಸ್ಟೆಲ್ ಬಳಿ ಬೆಂಕಿಯಿಂದ …

Leave a Reply

Your email address will not be published. Required fields are marked *